ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ವಿಧೇಯಕ ಸಂವಿಧಾನ ವಿರೋಧಿ

170122 Lingasuguru CPIM Protest
ಲಿಂಗಸುಗೂರಿನಲ್ಲಿ ಸಿಪಿಐಎಂ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
Published on

ಲಿಂಗಸುಗೂರು: ಮತಾಂಧ ಹಾಗೂ ಜಾತಿವಾದಕ್ಕೆ ನೆರವಾಗುವ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ವಿಧೇಯಕ ಸಂವಿಧಾನ ವಿರೋಧಿಯಾಗಿದೆ. ಸರ್ಕಾರ ಮಸೂದೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಸಿಪಿಐಎಂ ಸೋಮವಾರ ಪ್ರತಿಭಟನೆ ನಡೆಸಿತು.

ವಿಧೇಯಕ ದುಡಿಯುವ ಜನರ ವಿಭಜನೆಗೆ ಕಾರಣವಾಗಲಿದೆ. ಬಲವಂತದ ಮತಾಂತರ ಮತ್ತು ಮರು ಮತಾಂತರವನ್ನು ಪಕ್ಷ ಬಲವಾಗಿ ವಿರೋಧಿಸುತ್ತದೆ. ಆದರೆ, ಸರ್ಕಾರ ಮಂಡಿಸಿರುವ ವಿಧೇಯಕ ವ್ಯಕ್ತಿಯು ತನಗಿಷ್ಟವಾದ ಮತವನ್ನು ಆಚರಿಸಲು ಸರ್ಕಾರದ ಅನುಮತಿ ಕಡ್ಡಾಯಗೊಳಿಸಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net