ಮಳೆ ನಿಂತರೂ ತಗ್ಗದ ಪ್ರವಾಹ ಪರಿಸ್ಥಿತಿ

UNTILETED (1)
ಲಿಂಗಸುಗೂರು ಸಮೀಪ ಶೀಲಹಳ್ಳಿ ಸೇತುವೆ ಮೇಲೆ ನೀರು ಹರಿಯುತ್ತಿರುವುದು.
Published on

ಲಿಂಗಸುಗೂರು: ತಾಲೂಕಿನಲ್ಲಿ ಮಳೆ ನಿಂತಿದ್ದರಿಂದ ರೈತಾಪಿ ವರ್ಗಕ್ಕೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದರೂ ನದಿ ಪಾತ್ರದ ಗ್ರಾಮಗಳ ಜನರ ಗೋಳು ತಪ್ಪಿಲ್ಲ.

ಮಹಾರಾಷ್ಟ್ರ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದರಿಂದ ಕೃಷ್ಣಾ ನದಿಗೆ 2,60,280 ಕ್ಯೂಸೆಕ್ ನೀರು ಗುರುವಾರ ಬಿಡಲಾಗಿದೆ. ಇದರಿಂದ ನಡುಗಡ್ಡೆಗಳಾದ ಕರಕಲಗಡ್ಡಿ, ಮ್ಯಾದರಗಡ್ಡಿ, ವೆಂಕಮ್ಮನಗಡ್ಡಿ ಜಲಾವೃತಗೊಂಡಿವೆ. ನದಿ ತೀರದ ಗದ್ದಿಗಿ, ಯರಗೋಡಿ, ಕಡದರಗಡ್ಡಿ, ಶೀಲಹಳ್ಳಿಯ ಜನರಿಗೆ ಪ್ರವಾಹ ಭೀತಿ ಆವರಿಸಿದೆ. ಶೀಲಹಳ್ಳಿ ಸೇತುವೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದ್ದರಿಂದ ಹಂಚಿನಾಳ, ಯಳಗುಂದಿ, ಕಡದರಗಡ್ಡಿ, ಯರಗೋಡಿ ಗ್ರಾಮಗಳಿಗೆ ಜಲದುರ್ಗ ಮಾರ್ಗವಾಗಿ ಹೋಗಬೇಕಿದೆ. ಲಿಂಗಸುಗೂರಿಗೆ ಬರಲು ತೀವ್ರ ಸಮಸ್ಯೆಯಾಗಿದೆ. ಕೃಷ್ಣಾ ನದಿ ಪ್ರವಾಹ ಹೆಚ್ಚಳವಾಗಿದ್ದರಿಂದ ಕೃಷಿ ಪಂಪ್‌ಸೆಟ್‌ಗಳು ಮುಳುಗಡೆಯಾಗಿದ್ದು, ರೈತರಿಗೆ ಚಿಂತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net