ಬಾಕಿ ಫಲಾನುಭವಿಗಳಿಗೆ ಶೀಘ್ರ ಪಂಪ್‌ಸೆಟ್

270522 Lingasuguru Pumpset, distribute equipment
ಲಿಂಗಸುಗೂರು ತಾಪಂ ಆವರಣದಲ್ಲಿ ರೈತ ಫಲಾನುಭವಿಗಳಿಗೆ ಶಾಸಕ ಡಿ.ಎಸ್.ಹೂಲಗೇರಿ ಪಂಪ್‌ಸೆಟ್ ಹಾಗೂ ಸಾಮಗ್ರಿಗಳನ್ನು ಶುಕ್ರವಾರ ವಿತರಿಸಿದರು.
Published on

ಲಿಂಗಸುಗೂರು: ತಾಪಂ ಆವರಣದಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಭಾವಿಗಳಿಗೆ ಅಳವಡಿಸಬೇಕಿರುವ ಪಂಪ್‌ಸೆಟ್ ಹಾಗೂ ಸಾಮಗ್ರಿಗಳನ್ನು ರೈತ ಫಲಾನುಭವಿಗಳಿಗೆ ಶಾಸಕ ಡಿ.ಎಸ್.ಹೂಲಗೇರಿ ಶುಕ್ರವಾರ ವಿತರಿಸಿದರು.

2018-19 ನೇ ಸಾಲಿನಲ್ಲಿ 20 ಪಂಪ್‌ಸೆಟ್‌ಗಳ ವಿತರಣೆ ಗುರಿ ಹೊಂದಲಾಗಿತ್ತು. 12 ಫಲಾನುಭವಿಗಳಿಗೆ ಪಂಪ್‌ಸೆಟ್ ವಿತರಿಸಲಾಗಿದ್ದು, ಉಳಿದ ಫಲಾನುಭವಿಗಳಿಗೆ ಶೀಘ್ರ ವಿತರಿಸಲಾಗುವುದು. ತಾಪಂ ಅಧ್ಯಕ್ಷರ ಕೋಟಾದಡಿ ಐದು ಮತ್ತು ಶಾಸಕರ ಗುರಿಯ ಎರಡು ಫಲಾನುಭವಿಗಳಿಗೂ ಪಂಪ್‌ಸೆಟ್ ವಿತರಣೆ ಮಾಡಲಾಗುವುದು. 2019-20 ನೇ ಸಾಲಿನಲ್ಲಿ 20 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ 15 ಫಲಾನುಭವಿಗಳಿಗೆ ಪಂಪ್‌ಸೆಟ್ ವಿತರಣೆ ಮಾಡಲಾಗುವುದು. ಉಳಿದ ಐದು ಫಲಾನುಭವಿಗಳ ದಾಖಲಾತಿ ಸಲ್ಲಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ವಿತರಣೆ ಬಾಕಿ ಉಳಿದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net