ಎನ್‌ಆರ್‌ಬಿಸಿ ಅಚ್ಚುಕಟ್ಟು ವ್ಯಾಪ್ತಿಯ ರೈತರ ಸಮಸ್ಯೆ ಪರಿಹರಿಸುವಂತೆ ರೈತ ಸಂಘ ಆಗ್ರಹ

Lingasuguru NRBC Farmers Appeal
ಎನ್‌ಆರ್‌ಬಿಸಿ ಅಚ್ಚುಕಟ್ಟು ವ್ಯಾಪ್ತಿಯ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ(ಕೋಡಿಹಳ್ಳಿ ಬಣ) ದ ನೇತೃತ್ವದಲ್ಲಿ ರೈತರು ಕೆಬಿಜೆಎನ್‌ಎಲ್ ಎಇಇ ಸುರೇಂದ್ರ ಬಾಬುಗೆ ಶನಿವಾರ ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ಬಸವಸಾಗರ ಜಲಾಶಯದ ಬಲದಂಡೆ ಮತ್ತು ರಾಂಪುರ ಏತನೀರಾವರಿ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ(ಕೋಡಿಹಳ್ಳಿ ಬಣ)ದ ನೇತೃತ್ವದಲ್ಲಿ ರೈತರು ಕೆಬಿಜೆಎನ್‌ಎಲ್ ಎಇಇ ಸುರೇಂದ್ರ ಬಾಬುಗೆ ಶನಿವಾರ ಮನವಿ ಸಲ್ಲಿಸಿದರು.

ಎನ್‌ಆರ್‌ಬಿಸಿ ಕಾಲುವೆಗೆ ಜಮೀನು ಸೇರ್ಪಡೆಗೊಳ್ಳದ ಪಹಣಿಯ ಲೋಪದೋಷ ಸರಿಪಡಿಸಬೇಕು. ಬಲದಂಡೆ ನಾಲೆ ಅಂದಾಜು ಪತ್ರಿಕೆಯಂತೆ ಕಾಮಗಾರಿ ಕೈಗೊಳ್ಳಬೇಕು. ರಾಂಪುರ ಏತ ನೀರಾವರಿಗೆ ಸಂಬಂಧಿಸಿ ಜಾಕ್‌ವೆಲ್-1ರ ವಿತರಣಾ ಕಾಲುವೆ 4ರಲ್ಲಿ ಬೆಂಡೋಣಿ ಗ್ರಾಮದ ಚರಂಡಿ ನೀರು ಸೇರ್ಪಡೆಗೊಳ್ಳುತ್ತಿದ್ದು, ತಡೆಯಬೇಕು ಎಂದರು.

ರಾಂಪುರ ಏತ ನೀರಾವರಿ ಕಾಲುವೆಯ ಅಡವಿಬಾವಿ ಗೇಟ್‌ನಿಂದ ಕೆಸರಟ್ಟಿ ತಾಂಡಾ, ಈಚನಾಳ ತಾಂಡಾ, ಈಚನಾಳ ಗ್ರಾಮಗಳ ಜಮೀನುಗಳಿಗೆ ಕಾಲುವೆ ಮೂಲಕ ನೀರು ಸರಬರಾಜಿಗೆ ಕ್ರಮಕೈಗೊಳ್ಳಬೇಕು. ಏಪ್ರಿಲ್ 30ರವರೆಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು. ಎನ್‌ಆರ್‌ಬಿಸಿ ಕಾಲುವೆಗೆ ಕಡಿತವಾಗದೆ ಇರುವ ಮತ್ತು ಕಾಲುವೆ ಪಕ್ಕ ಇರುವ ಜಮೀನಿನಲ್ಲಿ ಕಾಲುವೆ ಹಾದು ಹೋಗಿದ್ದು, ಪಹಣಿಯಲ್ಲಿ ತಮಗೆ ಬೇಕಾದ ರೀತಿಯಲ್ಲಿ ಎಕರೆ, ಗುಂಟೆ ಕಡಿತ ಮಾಡಿ ರೈತರಿಗೆ ಮೋಸ ಮಾಡಿದ್ದು, ದಾಖಲೆ ತಿದ್ದುಪಡಿ ಜತೆಗೆ ರೈತರಿಗೆ ಪರಿಹಾರ ಹಣ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮುಖಂಡರಾದ ಸಂಗನಗೌಡ, ಚೇತನ ಕಡಿ, ಖಾಜಾವಲಿ, ಸಗರಪ್ಪ, ಸೋಮಲೆಪ್ಪ, ಧರ್ಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net