

ಲಿಂಗಸುಗೂರು: ಎನ್‌ಇಕೆಆರ್‌ಟಿಸಿ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯಿಸಿ ಅಭ್ಯರ್ಥಿಗಳು ಪಟ್ಟಣದಲ್ಲಿ ಶಾಸಕ ಮಾನಪ್ಪ ವಜ್ಜಲ ಆಪ್ತ ಸಹಾಯಕ ರಮೇಶ ಕಟ್ಟಿಮನಿಗೆ ಗುರುವಾರ ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ 2019ರಲ್ಲಿ 1650 ಹುದ್ದೆಗಳನ್ನು ಸಂಪೂರ್ಣ ಭರ್ತಿ ಮಾಡಿಕೊಳ್ಳಲಾಗಿದೆ. ಆದರೆ ಎನ್‌ಇಕೆಆರ್‌ಟಿಸಿಯಲ್ಲಿ 2814 ಹುದ್ದೆಗಳ ಬಿಡುಗಡೆ ಮಾಡಿದ್ದ ನೋಟಿಫಿಕೇಷನ್ ಪೈಕಿ 2025ರಲ್ಲಿ ಸರ್ಕಾರ ಕೇವಲ ಒಂದು ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದೆಂದು ಆದೇಶ ಹೊರಡಿಸಿದೆ. ಆದರೆ ಅರ್ಜಿ ಹಾಕಿದ ಶೇ.90 ಅಭ್ಯರ್ಥಿಗಳ ವಯೋಮಿತಿ ಮೀರುತ್ತಿದೆ. ಕಾರಣ ಈ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.