ನರಕಲದಿನ್ನಿ ಗ್ರಾಪಂನಲ್ಲಿ ಅನಧಿಕೃತ ಸಿಬ್ಬಂದಿ ನಿರ್ಬಂಧಿಸಿ

25022022 Lingasugur DSS protest
Published on

ಲಿಂಗಸುಗೂರು: ತಾಲೂಕಿನ ನರಕಲದಿನ್ನಿ ಗ್ರಾಪಂನ 14 ಮತ್ತು 15 ನೇ ಹಣಕಾಸು ಯೋಜನೆಯ ಅನುದಾನ ದುರ್ಬಳಕೆಯಾಗಿದೆ. ಗ್ರಾಪಂನಲ್ಲಿ ಅನಧಿಕೃತವಾಗಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎಸಿ ಕಚೇರಿ ತಹಸೀಲ್ದಾರ್ ಶಂಶಾಲಮ್‌ಗೆ ದಲಿತ ಸಂಘರ್ಷ ಸಮಿತಿ ಪ್ರಮುಖರು ಗುರುವಾರ ಮನವಿ ಸಲ್ಲಿಸಿದರು.

ನರಕಲದಿನ್ನಿ ಹಾಗೂ ಗ್ರಾಪಂ ವ್ಯಾಪ್ತಿಯ ಇತರ ಗ್ರಾಮಗಳಲ್ಲಿ ಕುಡಿವ ನೀರು, ಚರಂಡಿ, ರಸ್ತೆ ಸಮಸ್ಯೆಯಿಂದ ಜನರು ಸಂಕಷ್ಟಕ್ಕೀಡಾಗುವಂತಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ತಮಗಿಷ್ಟ ಬಂದವರಿಗೆ ನಿಯಮ ಬಾಹಿರವಾಗಿ ಜಾಬ್ ಕಾರ್ಡ್ ನೀಡಲಾಗುತ್ತಿದೆ. 14 ಮತ್ತು 15 ನೇ ಹಣಕಾಸು ಯೋಜನೆಯ ಅನುದಾನ ದುರ್ಬಳಕೆ, ಗ್ರಾಪಂನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net