ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಿ

Untitled design (54)
ಲಿಂಗಸುಗೂರು ಪುರಸಭೆ ಎಫ್‌ಡಿಸಿ ರಾಜಶೇಖರ ಪಾಟೀಲ್‌ಗೆ ಕರ್ನಾಟಕ ದಲಿತ ಸೇನೆ ಮುಖಂಡರು ಮನವಿ ಸಲ್ಲಿಸಿದರು. ಸೇನೆ ತಾಲೂಕು ಅಧ್ಯಕ್ಷ ಬಸವರಾಜ ಗೋಸ್ಲೆ, ಉಪಾಧ್ಯಕ್ಷ ಶಿವರಾಜ ಯರಡೋಣ, ಪ್ರಧಾನ ಕಾರ್ಯದರ್ಶಿ ಗಣೇಶ ದೇವರ ಭೂಪುರ, ಅಮರೇಶ ಕರಡಕಲ್, ನಾಗರಾಜ ಕೆಸರಟ್ಟಿ ಇದ್ದರು.
Published on

ಲಿಂಗಸುಗೂರು: ವಾರ್ಡ್‌ಗಳಲ್ಲಿ ಕುಡಿವ ನೀರು ಸಮರ್ಪಕವಾಗಿ ಪೂರೈಸಲು ಒತ್ತಾಯಿಸಿ ಕರ್ನಾಟಕ ದಲಿತ ಸೇನೆ ಮುಖಂಡರು ಪಟ್ಟಣದ ಪುರಸಭೆ ಎಫ್‌ಡಿಸಿ ರಾಜಶೇಖರ ಪಾಟೀಲಗೆ ಗುರುವಾರ ಮನವಿ ಸಲ್ಲಿಸಿದರು.

ಪಟ್ಟಣದ ಗಡಿಯಾರ ವೃತ್ತ, ಬಸವಸಾಗರ ಕ್ರಾಸ್, ಹೊಸ ಬಸ್ ನಿಲ್ದಾಣ, ಹಳೆಯ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಪ್ರದೇಶಗಳಲ್ಲಿ ಬಿಸಿಲಿನ ಪ್ರಕರತೆಯಿಂದ ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗಿದೆ. ಸಮರ್ಪಕವಾಗಿ ನೀರು ಒದಗಿಸಲು ನೀರುಗಂಟಿಗಳಿಗೆ ಸೂಚಿಸಬೇಕು. ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈಶ್ವರ ದೇವಸ್ಥಾನ, ಮುಕ್ತಿಧಾಮ ರಸ್ತೆ ಅಕ್ಕಪಕ್ಕದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡದೆ ದುರ್ವಾಸನೆ ಬೀರುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net