ಚರಂಡಿ ಒತ್ತುವರಿ ತೆರವಿಗೆ ದಸಂಸ ಆಗ್ರಹ

MANAVI
ಲಿಂಗಸುಗೂರು ದಸಂಸ ತಾಲೂಕು ಘಟಕದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡಗೆ ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಚರಂಡಿ ಒತ್ತುವರಿ ತೆರವಿಗೆ ಆಗ್ರಹಿಸಿ ದಲಿತ ಸಂರಕ್ಷಾ ಸಮಿತಿ ಮುಖಂಡರು ಮುಖ್ಯಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಗ್ರಾಮದ ದುರುಗಮ್ಮ ದೇವಸ್ಥಾನ ಸಮೀಪದ ಮುಖ್ಯ ರಸ್ತೆಯಲ್ಲಿ ಅಬೀಬ್ ಶೇಟ ಎಂಬುವರು ಮನೆ ನಿರ್ಮಾಣ ಮಾಡಿಕೊಂಡಿದ್ದು, ಪುರಸಭೆ ನಿರ್ಮಿಸಿದ ಚರಂಡಿ ಮೇಲೆ ಶೌಚಗೃಹ ಕಟ್ಟಿಕೊಂಡು ಸೇಫ್ಟಿ ಟ್ಯಾಂಕ್ ನಿರ್ಮಾಣ ಮಾಡದೆ ಶೌಚದ ಪೈಪ್‌ಗಳನ್ನು ಚರಂಡಿಗೆ ಬಿಟ್ಟಿದ್ದಾರೆ.

ಇದರಿಂದ ಗಬ್ಬು ವಾಸನೆ ಉಂಟಾಗಿ ಅಕ್ಕಪಕ್ಕದ ಮನೆಯವರು ತಮ್ಮ ಮನೆ ಮುಂದೆ ಕೂಡದಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಇವರ ವಿರುದ್ಧ ಕ್ರಮ ಜರಗಿಸಬೇಕು. ಚರಂಡಿ ಒತ್ತುವರಿ ಮಾಡಿ ನಿರ್ಮಿಸಿದ ಶೌಚಗೃಹವನ್ನು ತೆರವುಗೊಳಿಸಬೇಕು.

ಇದಲ್ಲದೆ ಗ್ರಾಮದ ಇತರಡೆ ಚರಂಡಿ ಒತ್ತುವರಿಯಾಗಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ದಸಂಸ ಅಧ್ಯಕ್ಷ ಮೋಹನ ಗೋಸ್ಲೆ, ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಅನೀಲ್‌ಕುಮಾರ, ಅಮರೇಶ ಮ್ಯಾಗೇರಿ, ಮಲ್ಲಪ್ಪ ವಗ್ಗರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net