ಲೂರ್ದ್ ಮಾತೆ ಆದರ್ಶ ಪಾಲಿಸಿ; ಫಾ.ಸುನೀಲ್ ಅನ್‌ಸ್ಲೇಮ್ ಹೇಳಿಕೆ ರಥೋತ್ಸವ ದಿವ್ಯ ಬಲಿ ಪೂಜೆ

06022023 lingasguru Mother Lourdes Church
Published on

ಲಿಂಗಸುಗೂರು: ಪ್ರತಿಯೊಬ್ಬರ ಜೀವನದಲ್ಲಿ ಸುಖ-ದುಃಖಗಳನ್ನು ದೇವರು ಸಮನಾಗಿ ದಯಪಾಲಿಸಿರುತ್ತಾನೆ. ಜೀವನ ಪೂರ್ತಿ ಸಂಕಷ್ಟ ಜೀವನ ನಡೆಸಿದ ಲೂರ್ದು ಮಾತೆ ಸಕಲ ಜೀವಾತ್ಮರಿಗೂ ಸನ್ಮಾರ್ಗ ತೋರಿದ್ದಾರೆ ಎಂದು ಸಂವಹನ ಕೇಂದ್ರದ ನಿರ್ದೇಶಕ ಫಾ.ಸುನೀಲ್ ಅನ್‌ಸ್ಲೇಮ್ ಹೇಳಿದರು.

ಪಟ್ಟಣದ ಲೂರ್ದು ಮಾತೆ ಚರ್ಚ್‌ನ ವಾರ್ಷಿಕೋತ್ಸವ ಪ್ರಯುಕ್ತ ಭಾನುವಾರ ಸಂಜೆ ಲೂರ್ದುಮಾತೆ ರಥೋತ್ಸವ ದಿವ್ಯಾಬಲಿ ಪೂಜೆ ವೇಳೆ ಪ್ರಬೋಧನೆ ನೀಡಿದರು. ಲೂರ್ದು ನಗರದಲ್ಲಿ 1858 ರಲ್ಲಿ ಮಾತೆ ಮರಿಯ ಅದ್ಭುತಗಳನ್ನು ಸೃಷ್ಟಿಸುವ ವೇಳೆ ಚಿಲುಮೆಯೊಂದು ಹೊರಹೊಮ್ಮಿತು. ಒಬ್ಬ ಬಾಲಕಿಗೆ ಲೂರ್ದು ಮಾತೆ 18 ಬಾರಿ ದರ್ಶನ ನೀಡಿದ ದಿನವನ್ನೇ ಲೂರ್ದು ಮಾತೆಯ ದಿನವನ್ನಾಗಿ ಆಚರಿಸುತ್ತ ಬರಲಾಗಿದೆ. ಲೂರ್ದು ಮಾತೆಯ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net