ಮಾದಯ್ಯಭವನ ನಿರ್ಮಾಣ ಮಾಡಿ; ಶಾಸಕ ಡಿ.ಎಸ್.ಹೂಲಗೇರಿಗೆ ಹೂಗಾರ ಸಮುದಾಯ ಮನವಿ

27092021 Lingasugur MLA DS Hulageri
Published on

ಲಿಂಗಸುಗೂರು: ಶಿವಶರಣ ಹೂಗಾರ ಮಾದಯ್ಯ ಭವನ ನಿರ್ಮಾಣ ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಶಾಸಕ ಡಿ.ಎಸ್.ಹೂಲಗೇರಿಗೆ ಹೂಗಾರ ಸಮುದಾಯ ಸೋಮವಾರ ಮನವಿ ಸಲ್ಲಿಸಿತು.

ತಾಲೂಕಿನಲ್ಲಿ ಐದು ಸಾವಿರ ಹೂಗಾರರು ಇದ್ದು, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತ ಬಂದಿದ್ದಾರೆ. ಪಟ್ಟಣದಲ್ಲಿ ಸ್ವಂತ ನಿವೇಶನ ಹೊಂದಿರುವ ಸಮುದಾಯಕ್ಕೆ ಭವನದ ಅಗತ್ಯವಿದ್ದು ಮಾದಯ್ಯ ಹೂಗಾರ ದೇವಸ್ಥಾನ ಮತ್ತು ಭವನ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು. ಮಾದಯ್ಯನವರ ಜಯಂತಿಯನ್ನು ಸರ್ಕಾರಿ ಕಚೇರಿಗಳಲ್ಲಿ ಆಚರಿಸಬೇಕು. ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಪುರಸಭೆ ವ್ಯಾಪ್ತಿಯ ಒಂದು ವೃತ್ತಕ್ಕೆ ಮಾದಯ್ಯನವರ ಹೆಸರಿಡಬೇಕು. ಹೂಗಾರ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮುಖಂಡರಾದ ವೀರಭದ್ರಪ್ಪ ಹೂಗಾರ, ಬಸವರಾಜ ಹೂಗಾರ, ನಾಗರಾಜ ಹೂಗಾರ, ಹನುಮಂತ ಗೋನವಾರ, ನಾಗರಾಜ ತಡಕಲ್, ಸಿದ್ದಪ್ಪ ಹೂಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net