ಕಲಬೆರೆಕೆ ಅಡುಗೆ ಎಣ್ಣೆಯಿಂದ ಅನಾರೋಗ್ಯ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ ಎಚ್ಚರ

210722 Training program on oilseed processing organized at Lingasugur
ಲಿಂಗಸುಗೂರಿನಲ್ಲಿ ಆಯೋಜಿಸಿದ್ದ ಎಣ್ಣೆ ಕಾಳು ಸಂಸ್ಕರಣೆ ಕುರಿತ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ ಗುರುವಾರ ಉದ್ಘಾಟಿಸಿದರು.
Published on

ಲಿಂಗಸುಗೂರು: ಇತ್ತಿಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಲಬೆರೆಕೆ ಅಡುಗೆ ಎಣ್ಣೆ ಮಾರಾಟವಾಗುತ್ತಿದ್ದು, ಇದರ ಸೇವನೆ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ ಹೇಳಿದರು.

ಸ್ಥಳೀಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಎಣ್ಣೆ ಕಾಳು ಸಂಸ್ಕರಣೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿತ್ಯ ಆಹಾರ ತಯಾರಿಕೆಯಲ್ಲಿ ಎಣ್ಣೆ ಅತಿ ಮುಖ್ಯವಾದ ಪಾತ್ರವಹಿಸುತ್ತದೆ. ಅಡುಗೆಗೆ ಬಳಸುವ ಎಣ್ಣೆಯ ಬಗ್ಗೆ ತುಂಬಾ ಮುತುವರ್ಜಿ ವಹಿಸಬೇಕಾಗಿದೆ. ಪರಿಶುದ್ಧ ಎಣ್ಣೆ ಬಳಸಿ ಆರೋಗ್ಯ ಕಾಪಾಡಿಕೊಳ್ಳಲು ಎಣ್ಣೆ ಕಾಳು ಸಂಸ್ಕರಣಾ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.

ಕೃಷಿ ವಿವಿ ಸಂಪನ್ಮೂಲ ವ್ಯಕ್ತಿ ಪಿ.ಎಫ್.ಮಠದ್, ಎಣ್ಣೆ ತೆಗೆಯುವ ವಿಧಾನ, ಎಣ್ಣೆಯ ಕಚ್ಚಾ ಸಾಮಗ್ರಿಗಳ ತಯಾರಿಕೆ, ಪರಿಕರಗಳ ಕ್ರೋಢೀಕರಣ, ಆಹಾರ ಉತ್ಪಾದನೆಗೆ ಸಂಬಂಧಿಸಿದ ಲೈಸೆನ್ಸ್, ಪ್ಯಾಕೇಜ್ ಮಾಡುವ ವಿಧಾನ, ಶುದ್ಧ ಎಣ್ಣೆ ಮತ್ತು ಕಲಬೆರೆಕೆ ಎಣ್ಣೆಯ ವ್ಯತ್ಯಾಸಗಳ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net