ಉಪವಾಸ ವ್ರತ ಕೈಗೊಂಡ ಭಕ್ತರು

26LNG02-A
ಲಿಂಗಸುಗೂರು ಈಶ್ವರ ದೇವಸ್ಥಾನದ ಮೂರ್ತಿಗೆ ವಿಶೇಷ ಅಲಂಕಾರ ಮಾಡಿರುವುದು.
Published on

ಲಿಂಗಸುಗೂರು: ಮಹಾಶಿವರಾತ್ರಿ ನಿಮಿತ್ತ ಪಟ್ಟಣದ ಈಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ದೇವಸ್ಥಾನ, ಮಠಗಳಲ್ಲಿ ಬುಧವಾರ ವಿಶೇಷ ಪೂಜೆ ನಡೆಯಿತು.

ಪಟ್ಟಣದ ಈಶ್ವರ, ನಗರೇಶ್ವರ ದೇವಸ್ಥಾನ, ಸುಕ್ಷೇತ್ರ ಗುರುಗುಂಟಾ ಅಮರೇಶ್ವರ ದೇವಸ್ಥಾನ, ನವಲಿ ಜಡಿಶಂಕರಲಿಂಗೇಶ್ವರ, ಸಂತೆಕಲ್ಲೂರು ಘನಮಠೇಶ್ವರ ಮಠ, ದೇವರಭೂಪುರ ಬೃಹನ್ಮಠ, ಅಂಕಲಿಮಠ, ಸಜ್ಜಲಗುಡ್ಡ ಶರಣಮ್ಮನ ಮಠಗಳಲ್ಲಿ ಶಿವನ ಆರಾಧನೆ ಮಾಡಲಾಯಿತು.

ಮಹಾಶಿವರಾತ್ರಿ ಅಂಗವಾಗಿ ಬೆಳಗ್ಗೆಯಿಂದ ಉಪವಾಸ ವ್ರತ ಕೈಗೊಂಡ ಭಕ್ತರು, ಸಂಜೆ ಈಶ್ವರನ ದರ್ಶನ ಪಡೆದು ವ್ರತ ಅಂತ್ಯಗೊಳಿಸಿದರು. ಪಟ್ಟಣದ ಈಶ್ವರ ದೇವಸ್ಥಾನದ ಬಳಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಬ್ಯಾರಿಕೇಡ್ ಮತ್ತು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ದೇವಸ್ಥಾನ ಸಮಿತಿಯ ಡಾ.ಎನ್.ಎಲ್.ನಡುವಿನಮನಿ, ಡಾ.ಶರಣಗೌಡ ಪಾಟೀಲ್, ವೀರೇಶ ಐದನಾಳ, ಶರಣಬಸವ ವಾರದ್, ಈಶ್ವರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net