

ಲಿಂಗಸುಗೂರು: ಮಹಾರಾಷ್ಟ್ರದಿಂದ ಪಟ್ಟಣಕ್ಕೆ ಆಗಮಿಸಿದ ವಲಸಿಗರನ್ನು ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಯಿತು.
ಲಾಕ್‌ಡೌನ್ ಸಡಿಲಿಕೆಯಿಂದ ನಗರ ಮತ್ತು ನೆರೆ ರಾಜ್ಯಕ್ಕೆ ಗುಳೆ ತೆರಳಿದ್ದ ವಲಸಿಗರು ತವರಿಗೆ ಆಗಮಿಸುತ್ತಿದ್ದಾರೆ. ತಾಲೂಕು ಆಡಳಿತ ಕರೊನಾ ವೈರಸ್ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣ ಸಮೀಪದ ಕರಡಕಲ್ ಹತ್ತಿರದ ಎಸ್ಟಿ ವಸತಿ ನಿಲಯದಲ್ಲಿ ಮತ್ತೆ ಕ್ವಾರಂಟೈನ್ ಕೇಂದ್ರ ಆರಂಭಿಸಿದೆ.
ಮುಂಬಯಿಗೆ ಗುಳೆ ಹೋಗಿದ್ದ ಕರಡಕಲ್ ಗ್ರಾಮದ ಐದಾರು ಜನರು ಗುರುವಾರ ರಾತ್ರಿ ತವರಿಗೆ ಆಗಮಿಸಿದ್ದು, ಇವರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದೆ. ಕೋವಿಡ್-19 ಪತ್ತೆಗಾಗಿ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರುವವರೆಗೆ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ ಎಂದು ಪಿಎಸ್‌ಐ ಪ್ರಕಾಶರಡ್ಡಿ ಡಂಬಳ ತಿಳಿಸಿದರು.