ಬೀದಿ ನಾಯಿ, ಬಿಡಾಡಿ ದನ ಸ್ಥಳಾಂತರಿಸಿ

Untitled design(1)
ಲಿಂಗಸುಗೂರು ಪುರಸಭೆ ವ್ಯವಸ್ಥಾಪಕ ಹನುಮಂತ ನಾಯಕಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ, ಪ್ರಮುಖರಾದ ಕುರುಮೇಶ ನಾಯಕ, ಭೀಮೇಶ ನಾಯಕ, ವೆಂಕಟೇಶ ಉಪ್ಪಾರ, ಅಶೋಕ ನಾಯಕ, ಸಲೀಂ ಖಾನ್ ಇದ್ದರು.
Published on

ಲಿಂಗಸುಗೂರು: ಪಟ್ಟಣದಲ್ಲಿರುವ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಪುರಸಭೆ ವ್ಯವಸ್ಥಾಪಕ ಹನುಮಂತ ನಾಯಕಗೆ ಬುಧವಾರ ಮನವಿ ಸಲ್ಲಿಸಿದರು.

ಪಟ್ಟಣದ ಜೆಸ್ಕಾಂ ಕಚೇರಿ, ಹಳೆಯ ಬಸ್ ನಿಲ್ದಾಣ, ಬಸವಸಾಗರ ಕ್ರಾಸ್ ಸೇರಿ ಇತರ ರಸ್ತೆ ಮತ್ತು ವೃತ್ತಗಳಲ್ಲಿ ಬೀದಿನಾಯಿಗಳು ಮತ್ತು ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಪಾದಚಾರಿಗಳು ಸಂಚರಿಸದ ಪರಿಸ್ಥಿತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೀದಿನಾಯಿ ಹಾಗೂ ಬಿಡಾಡಿ ದನಗಳನ್ನು ಬೇರೆಡೆ ಸ್ಥಳಾಂತರಿಸಬೇಕು. ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಅವುಗಳ ಮಾಲೀಕರಿಗೆ ನೋಟಿಸ್ ನೀಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net