ಒಳಮೀಸಲಾತಿ ನೀಡಿದರೆ ಕಾಂಗ್ರೆಸ್ ಹಠಾವೋ

Untitled design(9)
ಲಿಂಗಸುಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಆಪ್ತ ಸಹಾಯಕ ಫಕೀರಪ್ಪಗೆ ಗೋರ ಸೇನಾ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು. ಸಂಘಟನೆ ತಾಲೂಕು ಅಧ್ಯಕ್ಷ ಥಾರೆಪ್ಪ ಜಾಧವ್, ಪ್ರಮುಖರಾದ ವೆಂಕಟೇಶ ರಾಠೋಡ್, ಡಾ.ನೀಲಪ್ಪ ಪವಾರ್, ರಾಜು ಚೌಹಾಣ್, ಢಾಕೂ ನಾಯ್ಕ, ಬೂದೆಪ್ಪ ಕಾರಬಾರಿ, ನೀಲೇಶ ಪವಾರ್, ಒಬ್ಬಣ್ಣ ಜಾಧವ್, ಖೀರಪ್ಪ ಪವಾರ್, ಪಿ.ಜಿ.ಪವಾರ್, ರವಿ ರಾಠೋಡ್, ಗೋಪಿಚಂದ ಚೌಹಾಣ, ಬೂಧೂ ನಾಯ್ಕ, ತಾವರೆಪ್ಪ ಜಾಧವ್, ಮೋತಿಲಾಲ ಪವಾರ್, ಪಾಂಡು ರಾಠೋಡ್, ಗೋವಿಂದ ಹಾಲಬಾವಿ ಸೇರಿ ಇತರರಿದ್ದರು.
Published on

ಲಿಂಗಸುಗೂರು; ಸರ್ಕಾರ ಒಳಮೀಸಲಾತಿ ಜಾರಿಗೊಳಿಸಬಾರದೆಂದು ಒತ್ತಾಯಿಸಿ ಗೋರ ಸೇನಾ ಸಂಘಟನೆ ಮುಖಂಡರು ಪಟ್ಟಣದ ಶಾಸಕರ ಆಪ್ತ ಕಾರ್ಯದರ್ಶಿ ಫಕೀರಪ್ಪಗೆ ಶುಕ್ರವಾರ ಮನವಿ ಸಲ್ಲಿಸಿದರು.

ರಾಜ್ಯದ ಲಂಬಾಣಿ, ಕೊರಚ, ಕೊರಮ ಮತ್ತು ಭೋವಿ ಸಮುದಾಯಗಳನ್ನು ಒಂದು ಗುಂಪಿನಲ್ಲಿರಿಸಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಯಿಂದ ಹಿಂದಿಕ್ಕಬೇಕೆಂಬ ಹುನ್ನಾರ ಸಹಿಸಲು ಸಾಧ್ಯವಿಲ್ಲ. ಡಾ.ಬಿ.ಆರ್.ಅಂಬೇಡ್ಕರರು ಸಂವಿಧಾನಾತ್ಮಕವಾಗಿ ನೀಡಿದ ಮೀಸಲಾತಿಯನ್ನು ಅಸಂವಿಧಾನಾತ್ಮಕ ಮತ್ತು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಕೂಡದು. ರಾಜ್ಯದಲ್ಲಿ ಎಲ್ಲ ಸಮುದಾಯಗಳ ಅಧ್ಯಯನ ಮಾಡದೆ ವೈಜ್ಞಾನಿಕವಾಗಿ ತಂತ್ರಾಂಶ ಸಂಗ್ರಹಿಸದೆ ತರಾತುರಿಯಲ್ಲಿ ಮೀಸಲಾತಿ ವರ್ಗೀಕರಣ ಮಾಡಿದರೆ ಪರಿಶಿಷ್ಟ ಜಾತಿಯ 101 ಜಾತಿಗಳ ಪೈಕಿ 99 ಸಮುದಾಯಗಳಿಗೆ ಅನ್ಯಾಯವಾಗಲಿದೆ. ರಾಜ್ಯ ಸರ್ಕಾರ ಅ.28 ರಂದು ಕರೆಯಲಾದ ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗೊಳಿಸಲು ನಿರ್ಧರಿಸುವುದಾಗಿ ಸಿಎಂ ಹೇಳಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಒಳಮೀಸಲಾತಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ನಾನಾ ಸಮುದಾಯಗಳ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರೆತಿರುವ ಅವಕಾಶಗಳು, ಆರ್ಥಿಕ ಸ್ಥಿತಿ, ರಾಜಕೀಯ ಸ್ಥಾನಮಾನ ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ-ಅಂಶಗಳನ್ನು ಒಳಗೊಂಡ ದತ್ತಾಂಶಗಳನ್ನು ಆಧರಿಸದೆ ಒಳಮೀಸಲಾತಿ ಹಂಚಿಕೆಯ ನಿರ್ಧಾರ ಸರಿಯಲ್ಲ. ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಹಠಾವ್ ಘೋಷಣೆ ಕೂಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net