ರಜೆಗಳನ್ನು ವಿಳಂಬ ಮಾಡದೆ ಮಂಜೂರು ಮಾಡಿ

020222 Lingasuguru Primary School Teachers Association Appeal
ಲಿಂಗಸುಗೂರು ಬಿಇಒ ಹುಂಬಣ್ಣ ರಾಠೋಡ್‌ಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಬುಧವಾರ ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಸಂಘದ ನೇತೃತ್ವದಲ್ಲಿ ಬಿಇಒ ಹುಂಬಣ್ಣ ರಾಠೋಡ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ಶೈಕ್ಷಣಿಕ ಅದಾಲತ್‌ನಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಶಿಕ್ಷಕರ ವೇತನದ ಪಿಡಿಎಫ್ ಪ್ರತಿಗಳನ್ನು ಶಿಕ್ಷಕರ ಸಂಘದ ವೆಬ್‌ಸೈಟ್‌ಗೆ ಲಿಂಕ್ ಮಾಡಬೇಕು. ಕಾಲಮಿತಿಯ ಭರ್ತಿಗಾಗಿ ನೀಡುವ ಅರ್ಜಿಗಳನ್ನು ಪರಿಗಣಿಸಿ ಸಿಆರ್ ಫಾರ್ಮ್ ಮಂಜೂರು ಮಾಡಬೇಕು. ಕಾಲಮಿತಿ ಬಡ್ತಿ ಶಿಕ್ಷಕರಿಗೆ ವಿಶೇಷ ದೃಢೀಕರಣ ಪತ್ರ ನೀಡಬೇಕು. ಬಡ್ತಿ ಮಂಜೂರು ಮಾಡಬೇಕು. ಶಿಶುಪಾಲನೆ ರಜೆ, ಗಳಿಕೆ ರಜೆ, ವೈದ್ಯಕೀಯ ರಜೆಗಳನ್ನು ವಿಳಂಬ ಮಾಡದೆ ಮಂಜೂರು ಮಾಡಬೇಕು.

ವೈದ್ಯಕೀಯ ಬಿಲ್‌ಗಳನ್ನು ತ್ವರಿತವಾಗಿ ನೀಡಬೇಕು. ಎಸ್‌ಜಿಟಿ ಶಿಕ್ಷಕರ ಬಾಕಿ ಉಳಿದ ಪರಿವೀಕ್ಷಣಾ ಅವಧಿ ಘೋಷಣಾ ಪತ್ರ ನೀಡಬೇಕು. ಶಿಕ್ಷಕರ ಜತೆ ಕಚೇರಿ ಸಿಬ್ಬಂದಿ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ಹಿಂಬಾಕಿ ವೇತನ, ಪ್ರಭಾರ ಭತ್ಯೆ ಮಂಜೂರು ಮಾಡಬೇಕು. ಗುರುತಿನ ಚೀಟಿ ವಿತರಿಸಬೇಕು. ಕೋವಿಡ್ ವೇಳೆ ಮರಣ ಹೊಂದಿದ ಶಿಕ್ಷಕರ ಕುಟುಂಬದವರಿಗೆ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net