ಗುರುವಿನ ಅನುಗ್ರಹದಿಂದ ಬದುಕು ಉಜ್ವಲ; ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಸ್ವಾಮೀಜಿ ಅಭಿಪ್ರಾಯ

24072021 Lingasuguru Gurupoornima
Published on

ಲಿಂಗಸುಗೂರು: ಅಜ್ಞಾನವೆಂಬ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವವನೇ ಗುರು ಎಂದು ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು ಹೇಳಿದರು.

ತಾಲೂಕಿನ ದೇವರಭೂಪುರ ಬೃಹನ್ಮಠದಲ್ಲಿ ಶನಿವಾರ ಜರುಗಿದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಹರ ಮುನಿದರೆ ಗುರು ಕಾಯುವನು ಎಂಬ ಉಕ್ತಿಯಂತೆ ಗುರುವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಗುರುವಿನ ಅನುಗ್ರಹದಿಂದ ಮನುಷ್ಯನ ಉಜ್ವಲ ಭವಿಷ್ಯ ರೂಪುಗೊಳ್ಳಲು ಸಾಧ್ಯ. ಹೀಗಾಗಿ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ ಎಂದರು.

ಮುಖಂಡರಾದ ಗುಂಡಣ್ಣ ಅರಳಿ, ಶರಣಪ್ಪ ಪಟ್ಟಣಶೆಟ್ಟಿ, ಅಮರೇಗೌಡ, ಮನೋಹರ ಪತ್ತಾರ, ಬಸವರಾಜ, ನಾಗರಾಜ ತಿಳಿ, ರೇವಣಸಿದ್ಧಯ್ಯ, ಕೃಷ್ಣಮೂರ್ತಿ, ರಮೇಶ ಜಗದಾರ ಸೇರಿ ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net