

ಕಾಂಗ್ರೆಸ್‌ನಿಂದ ಪೂರ್ವ ಸಿದ್ಧತಾ ಸಭೆ
ಲಿಂಗಸುಗೂರು: ಗ್ರಾಪಂ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ತಾಲೂಕಿನಾದ್ಯಂತ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಮತ್ತು ಅಧಿಕಾರ ಚುಕ್ಕಾಣಿ ಹೊಂದಲು ಪಕ್ಷದ ಕಾರ್ಯಕರ್ತರ ಸಂಘಟನಾತ್ಮಕ ಪರಿಶ್ರಮ ಅಗತ್ಯ ಎಂದು ಕೆಪಿಸಿಸಿ ಕಾರ್ಯದರ್ಶಿ ಶರಣಗೌಡ ಪಾಟೀಲ್ ಬಯ್ಯಪುರ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಅಧ್ಯಕ್ಷತೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವ ಸಿದ್ಧತಾ ಸಭೆಗೆ ಸಸಿಗೆ ನೀರೆರೆವ ಮೂಲಕ ಚಾಲನೆ ನೀಡಿ, ಮಾತನಾಡಿದರು. ಕಾಂಗ್ರೆಸ್ ತನ್ನದೇ ಆದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಬಡವರು, ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತ ಬರುತ್ತಿದೆ. ತನ್ನ ಅಧಿಕಾರ ಅವಧಿಯಲ್ಲಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತ ಅಭಿವೃದ್ಧಿ ಪರ ಚಿಂತನೆಯುಳ್ಳ ಪಕ್ಷವಾಗಿದೆ ಎಂದರು.
ಡಿ.27 ರಂದು ಗ್ರಾಪಂ ಚುನಾವಣೆ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆ ಜತೆಗೆ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಆದ್ಯತೆ ನೀಡಬೇಕು. ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿಯಬೇಕು. ಬರುವ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಮೂಲಕ ಕ್ಷೇತ್ರದಲ್ಲಿ ಸದೃಢ ಪಕ್ಷ ಕಟ್ಟುವ ಹೊಣೆಗಾರಿಕೆ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಜವಬ್ದಾರಿಯಾಗಿದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಮನಸ್ತಾಪ, ಗೊಂದಲಕ್ಕೆಡೆ ಮಾಡಿಕೊಡದೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
ಶಾಸಕ ಡಿ.ಎಸ್.ಹೂಲಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಮುಖಂಡರಾದ ಶರಣಪ್ಪ ಮೇಟಿ, ಲಾಲಅಹ್ಮದ್ ಸಾಬ್, ಹನುಮಂತಪ್ಪ ಕಂದಗಲ್, ಮಲ್ಲಣ್ಣ ವಾರದ, ಚಂದ್ರಕಾಂತ ನಾಡಗೌಡ, ನಾಗನಗೌಡ ತುರಡಗಿ, ಬಸವರಾಜಗೌಡ ಗಣೇಕಲ್, ಅಮರೇಶ ನಾಡಗೌಡ, ಬಸನಗೌಡ ಮೇಟಿ, ದಾವೂದ್, ಜಂಬನಗೌಡ ಕಾಚಾಪುರ, ಸೋಮಶೇಖರ ಐದನಾಳ, ಸುರೇಶಗೌಡ, ಮುದುಕಪ್ಪ ವಕೀಲ ಇತರರು ಇದ್ದರು.