

ಲಿಂಗಸುಗೂರು: ತಾಲೂಕಿನ ನಿಲೋಗಲ್ ಕ್ರಾಸ್‌ನ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರು ಸ್ವಾತಂತ್ರ್ಯ ದಿನಾಚರಣೆಯಂದು ಭಾರತಾಂಬೆಗೆ ಅಪಮಾನ ಮಾಡಿದ್ದು, ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ ಬಣ) ಕಾರ್ಯಕರ್ತರು ಎಸಿ ಕಚೇರಿ ಎಫ್‌ಡಿಸಿ ಅಮರೇಶಗೆ ಬುಧವಾರ ಮನವಿ ಸಲ್ಲಿಸಿದರು.
ನಿಲೋಗಲ್ ಕ್ರಾಸ್‌ನ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ರೇಣುಕಮ್ಮ ಅವರು ಸ್ವಾತಂತ್ರ್ಯ ದಿನದಂದು ಪಾದರಕ್ಷೆ ಧರಿಸಿ ಭಾರತ ನಕ್ಷೆ ಮೇಲೆ ನಿಂತುಕೊಂಡು ಭಾರತಾಂಬೆಗೆ ಅಗೌರವ ತೋರಿದ್ದಾರೆ. ಶ್ರೀಸಾಮಾನ್ಯರು ತಪ್ಪು ಮಾಡಬಹುದು ಆದರೆ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಹೊತ್ತ ಶಿಕ್ಷಕರೇ ಇಂತಹ ಅಸಡ್ಡೆ ತೋರಿದರೆ ಮಕ್ಕಳು ಯಾವರೀತಿ ನಡೆದುಕೊಳ್ಳುತ್ತಾರೆಂಬ ಅರಿವು ಇರುಬೇಕು.
ವಿವಿಧತೆಯಲ್ಲಿ ಏಕತೆ ಮೆರೆಯುತ್ತ ಬರುತ್ತಿರುವ ಭಾರತಾಂಬೆಗೆ ಅಪಮಾನ ಮಾಡಿದ ಮುಖ್ಯಶಿಕ್ಷಕಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕರವೇ ತಾಲೂಕು ಅಧ್ಯಕ್ಷ ಮಾದೇಶ ಸರ್ಜಾಪುರ, ಪ್ರಧಾನ ಕಾರ್ಯದರ್ಶಿ ಚುಡಾಮಣಿ ಚಿತ್ತಾಪುರ, ಬಸವರಾಜ ಪೇರಿ, ರಮೇಶ ಸುಂಕದ್, ಮುತ್ತಣ್ಣ ಗುಡಿಹಾಳ, ಜೀವಾನಾಯ್ಕ, ಬಸವರಾಜ, ಅಂಜಿ ನಾಯಕ, ದುರುಗಪ್ಪ ನಾಯಕ, ತಿಪ್ಪಣ್ಣ ಸರ್ಜಾಪುರ, ರಾಜು, ಮೌನೇಶ, ನಾರಾಯಣ, ರಾಜೇಶ, ವೀರೇಶ ಇತರರಿದ್ದರು.