

ಲಿಂಗಸುಗೂರು: ಸಂಸದ ರಾಹುಲ್ ಗಾಂಧಿ ಕೈಗೊಂಡಿರುವ ಜಿಲ್ಲೆಗೆ ಆಗಮಿಸಲಿದ್ದು, ಯಾತ್ರೆಗೆ ಯಶಸ್ಸಿಗೆ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕೆಂದು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಕ್ಕು ಮಾತನಾಡಿದರು. ದೇಶದ ಇತಿಹಾಸದಲ್ಲಿ ದೊಡ್ಡ ಪಾದಯಾತ್ರೆಯನ್ನು ರಾಹುಲ್ ಗಾಂಧಿ ಕೈಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಅ.21ರಂದು ಯಾತ್ರೆ ಮಂತ್ರಾಲಯದ ಮೂಲಕ ಜಿಲ್ಲೆಗೆ ಪ್ರವೇಶ ಮಾಡಲಿದ್ದು, ಯರಮರಸ್‌ನಲ್ಲಿ ಸಭೆ ನಡೆಯಲಿದೆ ಎಂದರು. ಪ್ರಮುಖರಾದ ಇಬ್ರಾಹಿಂ ಗ್ಯಾರಂಟಿ, ಶ್ರೀಮಂತ ದೇಗಲಮಡಿ, ನಾಗರಾಜ ಜಂಬಲದಿನ್ನಿ, ಬೂದೆಪ್ಪ ಇದ್ದರು.