ಮಹಿಳೆಯರಿಂದ ಸ್ವಾಭಿಮಾನದ ಬದುಕು

100522 Neeralakeri Farmers Association Taluk Women Unit Program
ನೀರಲಕೇರಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ರೈತ ಸಂಘದ ತಾಲೂಕು ಮಹಿಳಾ ಘಟಕದ ಕಾರ್ಯಕ್ರಮದಲ್ಲಿ ಶಾಂತಮ್ಮ ಹಿರೇಮನಿ, ನಾಗರತ್ನ, ಗಂಗಮ್ಮ ಹಾದಿಮನಿ, ಮಹಾದೇವಿ ಮರಗಂಟನಾಳ, ಮಾನಮ್ಮ ಅಗಸಿಮನಿ, ಮಂಜುಳಾ, ನೀಲಮ್ಮ ಗಟ್ಟಿಮನಿ, ಗದ್ದೆಮ್ಮ ಇತರರಿದ್ದರು.
Published on

ಲಿಂಗಸುಗೂರು: ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತ ಮಹಿಳೆಯರ ಪರಿಶ್ರಮ ಅಪಾರವಾಗಿದೆ ಎಂದು ರೈತ ಸಂಘ (ಕೋಡಿಹಳ್ಳಿ ಬಣ) ದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಹೇಳಿದರು.

ಭಾನುವಾರ ಸಂಜೆ ನೀರಲಕೇರಿಯಲ್ಲಿ ತಾಯಂದಿರ ದಿವಸ ಪ್ರಯುಕ್ತ ಆಯೋಜಿಸಿದ್ದ ರೈತ ಸಂಘದ ತಾಲೂಕ ಮಹಿಳಾ ಘಟಕ ಸ್ಥಾಪನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನಾ ರಂಗಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರು ಕೃಷಿ ಕ್ಷೇತ್ರದಲ್ಲೂ ಕೂಡ ಪುರುಷರಷ್ಟೇ ಮಹತ್ವದ ಹೆಜ್ಜೆಗಳನ್ನಿಟ್ಟು ಸ್ವಾಭಿಮಾನಿಗಳಾಗಿ ದುಡಿಯುತ್ತಿದ್ದಾರೆ ಎಂದರು. ಸಂಘದ ಮಹಿಳಾ ಘಟಕದ ನೂತನ ತಾಲೂಕು ಅಧ್ಯಕ್ಷೆ ಗುರುಬಾಯಿ ಹಿರೇಮಠ ಮಾತನಾಡಿದರು. ರೈತ ಮಹಿಳೆಯರಾದ ಶಾಂತಮ್ಮ ಹಿರೇಮನಿ, ನಾಗರತ್ನ, ಗಂಗಮ್ಮ ಹಾದಿಮನಿ, ಮಹಾದೇವಿ ಮರಗಂಟನಾಳ, ಮಾನಮ್ಮ ಅಗಸಿಮನಿ, ಮಂಜುಳಾ, ನೀಲಮ್ಮ ಗಟ್ಟಿಮನಿ, ಗದ್ದೆಮ್ಮ, ಮುಖಂಡರಾದ ಮರಿಸ್ವಾಮಿ ಬಳ್ಳಾರಿ, ಸಂಗನಗೌಡ ಹೊಸೂರು, ಕುಪ್ಪಣ್ಣ, ವೀರಭದ್ರಯ್ಯ ಯಲಗಲದಿನ್ನಿ, ವೀರಭದ್ರಯ್ಯ ಗುಂತಗೋಳ, ಯಲ್ಲನಗೌಡ ಪಾಟೀಲ್, ಚಂದ್ರಶೇಖರ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net