ಪ್ರಬಲ ಕಾನೂನು ರೂಪಿಸಲು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಗ್ರಹ

21092020 Lingasugur AISF Protest
Published on

ಲಿಂಗಸುಗೂರು: ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣ ಮಟ್ಟಹಾಕಲು ಪ್ರಬಲ ಕಾನೂನು ರೂಪಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಎಸಿ ಕಚೇರಿ ಸಿಬ್ಬಂದಿ ಅಮರೇಶಗೆ ಸೋಮವಾರ ಮನವಿ ಸಲ್ಲಿಸಿದರು.

ದೇಶ ಹಾಳುಗೆಡವಲು ಬಾಂಬ್ ಹಾಕಬೇಕಿಲ್ಲ, ಯುವಕರನ್ನು ಮಾದಕ ವ್ಯಸನಿಗಳನ್ನಾಗಿಸಿದರೆ ದೇಶವೇ ಹಾಳಾಗಲಿದೆ ಎಂಬುದು ಮಾಫಿಯಾದ ಆಶಯ. ಶಾಲಾ-ಕಾಲೇಜು ಮುಖ್ಯಸ್ಥರು ಮಾದಕ ವಸ್ತುಗಳ ಮುಕ್ತ ಕ್ಯಾಂಪಸ್ ಎಂದು ಘೋಷಿಸಿಕೊಳ್ಳಲು ಸರ್ಕಾರ ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಎಬಿವಿಪಿ ಸಂಘಟನೆಯ ಮಲ್ಲಿಕಾರ್ಜುನ, ಹೇಮಂತ್, ಸುನಿಲ್, ಮಲ್ಲಪ್ಪ ಯಲಗಲದಿನ್ನಿ, ಅಂಬಿಕಾ, ಅಶ್ವಿನಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net