

ಲಿಂಗಸುಗೂರು: ಕರೊನಾ ವೈರಸ್ ಸಮುದಾಯ ಮಟ್ಟದಲ್ಲಿ ಹರಡುವುದನ್ನು ತಪ್ಪಿಸಲು ಸರ್ಕಾರ ಭಾನುವಾರ ಲಾಕ್‌ಡೌನ್ ಘೋಷಿಸಿದ್ದರೂ, ಅನಗತ್ಯವಾಗಿ ಓಡಾಡುವ ವಾಹನಗಳನ್ನು ತಡೆದ ಪೊಲೀಸರು, ಸವಾರರಿಗೆ ದಂಡ ವಿಧಿಸಿದರು.
ಆಸ್ಪತ್ರೆ, ಔಷಧಿ ಅಂಗಡಿ, ಹಾಲು ಸೇರಿ ಅಗತ್ಯ ವಸ್ತುಗಳ ಹೊರತು ಪಡಿಸಿ ಎಲ್ಲ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಬಸ್ ನಿಲ್ದಾಣ ಸರ್ಕಲ್, ಗಡಿಯಾರ ಚೌಕ್, ಅಂಚೆ ಕಚೇರಿ ವೃತ್ತ, ಬಸವಸಾಗರ ವೃತ್ತ ಸೇರಿ ಕಲಬುರಗಿ, ರಾಯಚೂರು, ಬೆಂಗಳೂರು ರಸ್ತೆಗಳು ಬಹುತೇಕ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೂ ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದರು. ತಹಸೀಲ್ದಾರ್ ಚಾಮರಾಜ ಪಾಟೀಲ್, ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರು, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಪ್ರಕಾಶರಡ್ಡಿ ಡಂಬಳ ಸೇರಿ ಪೊಲೀಸ್ ಪೇದೆಗಳು ಇವರನ್ನೆಲ್ಲ ತಡೆದು, ದಂಡ ವಿಧಿಸಿದರು.