ನಿರಂತರ ವಿದ್ಯುತ್ ಸರಬರಾಜಿಗೆ ಕ್ರಮ ವಹಿಸಿ

Lingasuguru Power Supply
ಲಿಂಗಸುಗೂರು ಜೆಸ್ಕಾಂ ಎಇಇ ಸಿದ್ಧಯ್ಯಗೆ ವಿವಿಧ ದೊಡ್ಡಿಗಳ ನಿವಾಸಿಗಳು ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ಗುರುಗುಂಟಾ ಹೋಬಳಿಯ ಹಳೆಯ ಬೆಂಚಲದೊಡ್ಡಿ ಹಾಗೂ ಯರಜಂತಿ ಹಿರೇಹೊಲದ ದೊಡ್ಡಿಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿ ಜೆಸ್ಕಾಂ ಎಇಇ ಸಿದ್ಧಯ್ಯಗೆ ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ದೊಡ್ಡಿ ನಿವಾಸಿಗಳು ಸೋಮವಾರ ಮನವಿ ಸಲ್ಲಿಸಿದರು.

ಸದರಿ ದೊಡ್ಡಿಗಳಲ್ಲಿ 80 ರಿಂದ 100 ಕುಟುಂಬಗಳು ವಾಸವಿದ್ದರೂ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ನಿವಾಸಿಗಳು ಕತ್ತಲಲ್ಲಿ ದಿನ ದೂಡುವಂತಾಗಿದೆ. ರಾತ್ರಿ ವಿಷ ಜಂತುಗಳ ಭಯದಲ್ಲಿ ಬದುಕುವಂತಾಗಿದೆ.

ವಿದ್ಯುತ್ ಇಲ್ಲದೆ ಕುಡಿಯುವ ನೀರು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿದೆ. ನಿರಂತರ ವಿದ್ಯುತ್ ಒದಗಿಸುವಂತೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದರೂ ಗಮನ ಹರಿಸುತ್ತಿಲ್ಲ. ಒಂದು ವಾರದೊಳಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net