ಒತ್ತುವರಿ ಭೂಮಿಯನ್ನು ತೆರವುಗೊಳಿಸಿ

4LNG01
ಚುಕ್ಕನಟ್ಟಿದಲ್ಲಿ ಒತ್ತುವರಿ ಭೂಮಿ ತೆರವುಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಲಿಂಗಸುಗೂರು ತಹಸೀಲ್ದಾರ್ ಡಿ.ಎಸ್.ಜಮಾದಾರ್‌ಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಸಮಿತಿ ಸದಸ್ಯ ರಮೇಶ ವೀರಾಪುರ, ತಾಲೂಕು ಸಹ ಸಂಚಾಲಕ ನಿಂಗಪ್ಪ ಪಾನಶಾಪ್, ಅಮರಪ್ಪ ಬೊಂಬಾಯಿ, ಹಸನ್‌ಸಾಬ್, ಅಯ್ಯಪ್ಪ ಕಡೆಮನಿ, ಫಕೀರಪ್ಪ ಹೊಸಳ್ಳಿ ಇದ್ದರು.
Published on

ಲಿಂಗಸುಗೂರು: ಒತ್ತುವರಿ ಭೂಮಿಯನ್ನು ಕೂಡಲೇ ತೆರವುಗೊಳಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘದ ಮುಖಂಡರು ತಹಸೀಲ್ದಾರ್ ಡಿ.ಎಸ್.ಜಮಾದಾರ್‌ಗೆ ಗುರುವಾರ ಮನವಿ ಸಲ್ಲಿಸಿದರು.


ತಾಲೂಕಿನ ಚುಕ್ಕನಟ್ಟಿ ಸಿರವಾರದ ಸರ್ವೇ ನಂ.55 ಹಾಗೂ 53ರ ಜಮೀನಿನ ಮಧ್ಯದ ಯತಗಲ್ ಗ್ರಾಮಕ್ಕೆ ತೆರಳುವ ರಸ್ತೆ ಹಾಗೂ ಗೈರಾಣಿ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಿಂದ ವೀರಾಪುರ, ಚುಕ್ಕನಟ್ಟಿ, ಹಿರೇನಗನೂರು ಗ್ರಾಮಗಳ ಜಮೀನುಗಳಿಗೆ ತೆರಳಲು ಮತ್ತು ಜಾನುವಾರು ಮೇಯಿಸಲು ಗುಡ್ಡಕ್ಕೆ ತೆರಳಲು ತೊಂದರೆಯಾಗುತ್ತಿದೆ. ಒತ್ತುವರಿ ತೆರವುಗೊಳಿಸದಿದ್ದರೆ ಪ್ರತಿಭಟನಾ ಧರಣಿ ನಡೆಸುವಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net