ಬಸ್‌ಪಾಸ್ ವಿತರಣೆ ಅವಧಿ ವಿಸ್ತರಣೆ ಆಗ್ರಹ

101220 Lingasugru SFI Students Appeal for Buspass
ಲಿಂಗಸುಗೂರು ಸಾರಿಗೆ ಡಿಪೋ ಸಿಬ್ಬಂದಿ ಶಿವನಗೌಡಗೆ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ಸಾರಿಗೆ ಬಸ್‌ಪಾಸ್ ವಿತರಣೆ ಅವಧಿ ವಿಸ್ತರಿಸುವ ಜತೆಗೆ ಗ್ರಾಮೀಣ ಭಾಗಕ್ಕೆ ಸಾರಿಗೆ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಾರಿಗೆ ಡಿಪೋ ಸಿಬ್ಬಂದಿ ಶಿವನಗೌಡಗೆ ಗುರುವಾರ ಮನವಿ ಸಲ್ಲಿಸಿದರು.

ಪದವಿ ಕಾಲೇಜುಗಳು ಆರಂಭಗೊಂಡಿದ್ದು, ಸಾರಿಗೆ ಬಸ್‌ಪಾಸ್ ಅವಧಿ ಡಿ.10 ಕೊನೆಯ ದಿನವೆಂದು ಹೇಳಲಾಗುತ್ತಿದೆ. ಇದರಿಂದ ಹಣ ನೀಡಿ ಟಿಕೇಟ್ ಪಡೆದು ಕಾಲೇಜಿಗೆ ಬರುವ ಪರಿಸ್ಥಿತಿ ಬಂದಿದೆ. ಕರೊನಾ ವೈರಸ್ ಇಳಿಮುಖಗೊಂಡು ಸಾರಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಆದರೆ, ಹಳ್ಳಿಗಳಿಗೆ ಸಮರ್ಪಕ ಸಾರಿಗೆ ಇಲ್ಲದೆ ಕಾಲೇಜಿಗೆ ಬರಲು ತೊಂದರೆಯಾಗಿದೆ. ಕೂಡಲೇ ಬಸ್‌ಪಾಸ್ ವಿತರಣಾ ಅವಧಿ ವಿಸ್ತರಿಸಬೇಕು ಮತ್ತು ಎಲ್ಲ ಹಳ್ಳಿಗಳಿಗೆ ಸಾರಿಗೆ ಬಸ್ ಸಂಚರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಂಘಟನೆ ಮುಖಂಡರಾದ ಹೇಮಂತ, ವಿಠಲ ಹುನಗುಂದ, ವಿದ್ಯಾರ್ಥಿಗಳಾದ ನೂರಜಾ, ಶಮೀದಬೀ, ಈರಮ್ಮ, ಚನ್ನಮ್ಮ, ಯಲ್ಲಮ್ಮ, ನಾಗರತ್ನ, ಶಿವಮ್ಮ, ಶರಣಬಸವ, ಶಿವರಾಜ, ಹನುಮಂತ, ಸಿದ್ರಾಮೇಶ, ಶಶಿಕುಮಾರ, ವೈಭವ, ವೆಂಕಟೇಶ, ಭಾಗ್ಯೇಶ, ಸಂತೋಷ, ಬಸವರಾಜ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net