

ಲಿಂಗಸುಗೂರು: ಮಾವಿನಬಾವಿ, ಆಮದಿಹಾಳ ಗ್ರಾಮಗಳಲ್ಲಿ ಪಶುವೈದ್ಯಕೀಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಸ್.ಹೂಲಗೇರಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಆರ್‌ಐಡಿಎಫ್ ಟ್ರಾಂಚ್-24 (ಹೆಚ್ಚುವರಿ) ಯೋಜನೆಯಡಿ ತಲಾ 38 ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಕೈಗೊಳ್ಳುವ ಮೂಲಕ ಮಾದರಿ ಕ್ಷೇತ್ರವನ್ನಾಗಿಸಲು ಆದ್ಯತೆ ನೀಡುವುದಾಗಿ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಪಶುವೈದ್ಯ ರಾಚಪ್ಪ, ಮುಖಂಡರಾದ ಹೊನ್ನಪ್ಪ ಮೇಟಿ, ಮುದುಕಪ್ಪ ವಕೀಲ, ಬಸವರಾಜಗೌಡ ಗಣೇಕಲ್, ಸೋಮಶೇಖರ ಐದನಾಳ, ಮಲ್ಲಣ್ಣ ವಾರದ, ಪಾಮಯ್ಯ ಮುರಾರಿ, ಹನುಮಂತಪ್ಪ ಕಂದಗಲ್, ಎಂ.ಡಿ.ರಫಿ ಸೇರಿ ಇತರರು ಇದ್ದರು.