ಭಗೀರಥ ಸಮುದಾಯ ಅಭಿವೃದ್ಧಿ ಹೊಂದಲಿ ; ಮಾಜಿ ಶಾಸಕ ಮಾನಪ್ಪ ವಜ್ಜಲ್ ಸಲಹೆ

22112020 Lingasuguru Bhagirath community Pratibha
Published on

ಲಿಂಗಸುಗೂರು: ಭಗೀರಥ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಲಿ ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ್ ಸಲಹೆ ನೀಡಿದರು.

ಪಟ್ಟಣದಲ್ಲಿ ಭಾನುವಾರ ಭಗೀರಥ ಉಪ್ಪಾರ ಸಮುದಾಯ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವುದರಿಂದ ಅನ್ಯ ಮಕ್ಕಳೂ ಸಹ ನಾನಾ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಹೊಂದಲು ಪ್ರೇರಣೆಯಾಗಲಿದೆ.

ಮಠ-ಮಾನ್ಯಗಳು ಧಾರ್ಮಿಕ ಕಾರ್ಯಗಳ ಜತೆಗೆ ಜಾತಿ-ಭೇದವಿಲ್ಲದೆ ಶಿಕ್ಷಣ, ಪ್ರಸಾದ, ವಸತಿ ನೀಡುತ್ತ ಬಡ ಮಕ್ಕಳಿಗೆ ದಾರಿದೀಪವಾಗಿವೆ. ಸಿಎಂ ಬಿ.ಎಸ್.ಯಡಿಯೂರಪ್ಪನವರು ಮಠ-ಮಂದಿರಗಳ ಬಗ್ಗೆ ಅಪಾರ ಗೌರವಾಭಿಮಾನ ಹೊಂದಿದ್ದು, ಇತ್ತೀಚೆಗೆ ನೂರಾರು ಮಠ ಮಾನ್ಯಗಳಿಗೆ ಕೋಟ್ಯಂತರ ಹಣ ನೀಡಿದ್ದಾರೆ. ಇದರಿಂದ ಎಲ್ಲ ಸಮುದಾಯದ ಮಠಾಧೀಶರು ಇವರೇ ಸಿಎಂ ಆಗಿ ಮುಂದುವರಿಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಭಗೀರಥ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಭಗೀರಥ ಗುರುಪೀಠದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಬಸವರಾಜ ರಾಜಗುರು ಸ್ವಾಮೀಜಿ, ಭಗೀರಥ ಉಪ್ಪಾರ ಸಮುದಾಯ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ ಅಮ್ಮಾಪುರ, ಮುಖಂಡರಾದ ಚೇತನ ಪಾಟೀಲ್, ಗಿರಿಮಲ್ಲನಗೌಡ ಪಾಟೀಲ್, ವೀರನಗೌಡ ಲೆಕ್ಕಿಹಾಳ, ಅಮರೇಶ ನಾಡಗೌಡ, ಪಾಮಯ್ಯ ಮುರಾರಿ, ಕೆ.ವೆಂಕಟೇಶ, ಮೇದಪ್ಪ ಗುಳಗಿ, ಎನ್.ಸ್ವಾಮಿ ಹಟ್ಟಿ, ಯಮನೂರು, ಎಂ.ಡಿ.ರಫೀ, ನಾಗಪ್ಪ ವಕೀಲ, ಸೂರ್ಯಚಂದ್ರ ವಕೀಲ, ಬನ್ನೆಪ್ಪ ಹುಲಿಬೆಟ್ಟ, ಆದಪ್ಪ ಮನಗೂಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net