ಬಸವಕಲ್ಯಾಣದಲ್ಲಿ ಲಿಂಗಾಯತ ಮಹಾ ಅಧಿವೇಶನ

28022023 lingasugur shivanand idanal
Published on

ಲಿಂಗಸುಗೂರು: ಬೀದರ್ ಜಿಲ್ಲೆಯ ಬಸವಕಲ್ಯಾಣ ತೇರು ಮೈದಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಮಾ.4 ಮತ್ತು 5 ರಂದು ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾಅಧಿವೇಶನ ನಡೆಯಲಿದೆ ಎಂದು ಮಹಾಸಭಾ ತಾಲೂಕು ಅಧ್ಯಕ್ಷ ಶಿವಾನಂದ ಐದನಾಳ ಹೇಳಿದರು.

ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಾಸಭಾ ಅಧ್ಯಕ್ಷ ಶಿವಾನಂದ ಜಮಾದಾರ ನೇತೃತ್ವದಲ್ಲಿ ಮಹಾ ಅಧಿವೇಶನ ನಡೆಯಲಿದ್ದು, ಹರಗುರು ಚರಮೂರ್ತಿಗಳು, ಪಕ್ಷ ಭೇದವಿಲ್ಲದೆ ಲಿಂಗಾಯತ ಸಮುದಾಯದ ಗಣ್ಯರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಮಹಾಸಭಾ ತಾಲೂಕು ಗೌರವಾಧ್ಯಕ್ಷ ಗಿರಿಮಲ್ಲನಗೌಡ ಪಾಟೀಲ್, ಪ್ರಮುಖರಾದ ಭೂಪನಗೌಡ ಪಾಟೀಲ್, ಜಂಗಮಮೂರ್ತಿ ಬನ್ನಿಗೋಳಮಠ, ಶಿವಪ್ಪ ಸಕ್ರಿ, ವಿಶ್ವನಾಥ ಆನ್ವರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net