ಮಿಶ್ರ ವೈದ್ಯಕೀಯ ಪದ್ಧತಿ ಕೈಬಿಡಲು ಒತ್ತಾಯ

11122020 Lingasugur Doctors Protest
Published on

ಲಿಂಗಸುಗೂರು: ಕೇಂದ್ರ ಜಾರಿಗೆ ತರಲು ನಿರ್ಧರಿಸಿರುವ ಮಿಶ್ರ ವೈದ್ಯಕೀಯ (ಮಿಕ್ಸೊಪಥಿ) ಪದ್ಧತಿ ಕೈಬಿಡಬೇಕೆಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಎಸಿ ರಾಜಶೇಖರ ಡಂಬಳಗೆ ಶುಕ್ರವಾರ ಮನವಿ ಸಲ್ಲಿಸಿದರು.

ಆಯುರ್ವೇದ ವೈದ್ಯರು ಮಾಡಬಹುದಾದ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ ಪಟ್ಟಿ ಪ್ರಕಟಿಸಿದ್ದು, ಅವೈಜ್ಞಾನಿಕವಾಗಿ ಎಲ್ಲ ವೈದ್ಯಪದ್ಧತಿ ಮಿಶ್ರಗೊಳಿಸುವ ಹೆಜ್ಜೆಯು ಆಧುನಿಕ ವೈದ್ಯಕೀಯ ವೈದ್ಯರಿಗೆ ಸಮನಾಗದೆ ಹೈಬ್ರಿಡ್ ವೈದ್ಯರನ್ನು ನಿರ್ಮಿಸಲಿದೆ. ಆರೋಗ್ಯ ರಕ್ಷಕರ ಹೆಸರಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿ ನಕಲಿ ವೈದ್ಯರ ಸೃಷ್ಟಿಗೆ ಕಾರಣವಾಗಲಿದೆ. ಸರ್ಕಾರವು ಸಾರ್ವಜನಿಕ ಹಿತಾಸಕ್ತಿ ಮತ್ತು ಇತರೆ ವೈದ್ಯಕೀಯ ವ್ಯವಸ್ಥೆಯ ಹಿತದೃಷ್ಟಿಯಿಂದ ಕೂಡಲೇ ಆದೇಶ ರದ್ದುಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.


ಐಎಂಎ ತಾಲೂಕು ಅಧ್ಯಕ್ಷ ಶರಣಗೌಡ ಪಾಟೀಲ್, ಉಪಾಧ್ಯಕ್ಷ ಡಾ.ಅಮರೇಗೌಡ ಪಾಟೀಲ್, ಪದಾಧಿಕಾರಿಗಳಾದ ರಾಚಪ್ಪ ಬುದ್ದಿನ್ನಿ, ರಾಜೇಂದ್ರಕುಮಾರ ಮನಗೂಳಿ, ವಿಜಯಕುಮಾರ, ಬ್ರಹ್ಮಾನಂದ ಯಾದವಾಡ, ಡಿ.ಎಚ್.ಕಡದಳ್ಳಿ, ದಿಗಂಬರ, ಶ್ರೀನಿವಾಸ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net