ರಾಷ್ಟ್ರಮಟ್ಟದ ಸಂಸ್ಕೃತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

14
ಅಯೋಧ್ಯೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಸಂಸ್ಕೃತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರಾಜೇಶ್ವರಿಗೆ ನವದೆಹಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಶ್ರೀನಿವಾಸ ವರಖೇಡಿ, ನಿರ್ದೇಶಕ ಸರ್ವನಾರಾಯಣ ಪ್ರಶಸ್ತಿ ನೀಡಿದರು.
Published on


ಲಿಂಗಸುಗೂರು: ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ ಸಂತೆಕೆಲ್ಲೂರ ಗ್ರಾಮದ ಕುಮಾರಿ ರಾಜೇಶ್ವರಿ ಮಹಾಂತಿನಮಠ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

ಜನವರಿ ತಿಂಗಳಲ್ಲಿ ಸಂಸ್ಕೃತ ಯುನಿರ್ವಸಿಟಿಯಿಂದ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಾಹಿತ್ಯ ವಿಭಾಗದ ಕಾವ್ಯಕಂಠ ಪಾಠದಲ್ಲಿ ಪ್ರಥಮ ಸ್ಥಾನ ಪಡೆದು ಮಾ.29 ರಂದು ಅಯೋಧ್ಯೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಕೂಡಾ ಪ್ರಥಮ ಸ್ಥಾನ ಪಡೆದಿದ್ದಾಳೆ.

ಬೆಂಗಳೂರಿನ ಶುಭಂ ಕರೋತಿ ಮೈತ್ರೀಯ ಗುರುಕುಲದಲ್ಲಿ ರಾಜೇಶ್ವರಿ ಮಹಾಂತಿನಮಠ ಸಂಸ್ಕೃತ ಅಧ್ಯಯನ ಮಾಡಿದ್ದಾಳೆ. 5 ನೇ ತರಗತಿಯಿಂದ ಸಂಸ್ಕೃತ ವಿದ್ಯಾರ್ಜನೆಗೆ ಸೇರ್ಪಡೆಯಾಗಿ ಪ್ರಸಕ್ತ ವರ್ಷ ಪಿಯುಸಿ ದ್ವಿತೀಯ ವರ್ಷದ ಸಂಸ್ಕೃತ ಯುನಿವರ್ಸಿಟಿಯಿಂದ ಮಾರ್ಚ ತಿಂಗಳಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ 4ನೇ ರ‌್ಯಾಂಕಗಳಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net