ಪ್ರಾಚ್ಯವಸ್ತು ಸಂಗ್ರಹಾಲಯ ಸ್ಥಾಪಿಸಿ

Lingasugur Museum petiation
ಲಿಂಗಸುಗೂರು ಎಸಿ ಅವಿನಾಶ ಶಿಂಧೆಗೆ ಚಾರಣ ಬಳಗದ ಪ್ರಮುಖರು ಮನವಿ ಸಲ್ಲಿಸಿದರು. ಅಶೋಕ ನಾಯಕ ದಿದ್ದಿಗಿ, ರಾಜಶೇಖರ ನಾಯಕ, ಯಂಕೋಬ ನಾಯಕ, ಬಸವರಾಜ ಬೈಲಗುಡ್ಡ, ಅಜಯ ಕುಮಾರ ಶಿವಂಗಿ ಇದ್ದರು.
Published on


ಲಿಂಗಸುಗೂರು: ಸ್ಥಳೀಯ ಹಾಗೂ ಮಸ್ಕಿ ತಾಲೂಕಿನಲ್ಲಿ ಇತಿಹಾಸ ಪ್ರಸಿದ್ಧ ತಾಣಗಳಿವೆ. ಉಪವಿಭಾಗ ಕೇಂದ್ರ ಸ್ಥಾನವಾಗಿರುವ ಲಿಂಗಸುಗೂರಿನಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಸ್ಥಾಪಿಸಬೇಕೆಂದು ಒತ್ತಾಯಿಸಿ ಎಸಿ ಅವಿನಾಶ ಶಿಂಧೆಗೆ ಚಾರಣ ಬಳಗದ ಪ್ರಮುಖರು ಶುಕ್ರವಾರ ಮನವಿ ಸಲ್ಲಿಸಿದರು.

ತಾಲೂಕಿನ ಐತಿಹಾಸಿಕ ತಾಣಗಳ ಬಗ್ಗೆ ಅನೇಕ ಸಂಶೋಧಕರು ಮಾಹಿತಿ ಸಂಗ್ರಹಿಸಿದ್ದಾರೆ. ಚಾರಣ ಬಳಗ ಲಿಂಗಸುಗೂರು ಹಾಗೂ ಮಸ್ಕಿ ತಾಲೂಕು ವ್ಯಾಪ್ತಿಯ ವಿವಿಧೆಡೆ ಭೇಟಿ ನೀಡಿ ಸಂಶೋಧನೆ ಕೈಗೊಂಡಿದ್ದು, ಶಾಸನ, ವೀರಗಲ್ಲು ಸಂರಕ್ಷಣೆಯಿಲ್ಲದೆ ಬಿದ್ದಿವೆ. ಈ ಐತಿಹಾಸಿಕ ಕುರುಹುಗಳನ್ನು ಒಂದೆಡೆ ಸಂಗ್ರಹಿಸಿ ಸಂರಕ್ಷಿಸಲು ಸರ್ಕಾರದಿಂದ ಪ್ರಾಚ್ಯವಸ್ತು ಸಂಗ್ರಹಾಲಯ ಆರಂಭಕ್ಕೆ ಕ್ರಮ ವಹಿಸಬೇಕು. ಇದರಿಂದ ಇತಿಹಾಸ ಅರಿಯಲು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅನುಕೂಲವಾಗಲಿದೆ. ದೇಶದ ಇತಿಹಾಸ ಸಾರುವ ಕುರುಹುಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಲು ಪ್ರಾಚ್ಯವಸ್ತು ಸಂಗ್ರಹಾಲಯ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net