ಅಮರೇಶ್ವರ ಸುಕ್ಷೇತ್ರ-ಬೃಹನ್ಮಠದಲ್ಲಿ ಪಂಚಾಂಗ ಪಠಣ

23LNG02
Published on

ಲಿಂಗಸುಗೂರು: ಹಿಂದು ಸಂಪ್ರದಾಯದಲ್ಲಿ ಹೊಸ ವರ್ಷದಂದು ಆಚರಿಸಲ್ಪಡುವ ಯುಗಾದಿ ಪಾಡ್ಯದಂದು ಮಠಾಧೀಶರು, ಶಾಸ್ತ್ರಿಗಳು, ಜ್ಯೋತಿಷಿಗಳು ಸೇರಿದಂತೆ ವೈದಿಕರು ಪಂಚಾಂಗ ಪಠಣ ಮಾಡುವುದು ಸಂಪ್ರದಾಯ.

ಅದರಂತೆ ಇತಿಹಾಸ ಪ್ರಸಿದ್ಧ ಗುರುಗುಂಟ ಅಮರೇಶ್ವರ ಸುಕ್ಷೇತ್ರದಲ್ಲಿ ಮತ್ತು ದೇವರಭೂಪುರ ಬೃಹನ್ಮಠದಲ್ಲಿ ಪ್ರತಿವರ್ಷದಂತೆ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಬುಧವಾರ ಅರ್ಚಕ ಗಂಗಾಧರಯ್ಯ ಶಾಸ್ತ್ರಿ ನೂತನ ಶೋಭಕೃತ ನಾಮಸಂವತ್ಸರದ ಪಂಚಾಂಗ ಪಠಣ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net