ವಿಶ್ವ ರೇಬಿಸ್ ದಿನಾಚರಣೆ ; ಸಾಕು ನಾಯಿಗಳಿಗೆ ಚುಚ್ಚುಮದ್ದು

28092021 Lingasugur World Rabies Day
Published on

ಪುರಸಭೆ ಸಿಒ ನರಸಪ್ಪ ತಹಸೀಲ್ದಾರ್ ಚಾಲನೆ

ಲಿಂಗಸುಗೂರು: ವಿಶ್ವ ರೇಬಿಸ್ ದಿನಾಚರಣೆ ಪ್ರಯುಕ್ತ ಪಟ್ಟಣದ ಪಶುಸಂಗೋಪನಾ ಇಲಾಖೆ ಆಸ್ಪತ್ರೆಯಲ್ಲಿ ಸಾಕುನಾಯಿಗಳಿಗೆ ಮಂಗಳವಾರ ರೇಬಿಸ್ ಚುಚ್ಚುಮದ್ದು ಹಾಕಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುರಸಭೆ ಸಿಒ ನರಸಪ್ಪ ತಹಸೀಲ್ದಾರ್ ಮಾತನಾಡಿ, ಸರ್ಕಾರ ಪಶುಪಾಲನಾ ಇಲಾಖೆ ಮೂಲಕ ಸಾಕು ನಾಯಿಗಳಿಗೆ ಉಚಿತವಾಗಿ ರೇಬಿಸ್ ಚುಚ್ಚುಮದ್ದು ಹಾಕಲು ಮುಂದಾಗಿದೆ. ಇದರಿಂದ ಹುಚ್ಚು ನಾಯಿ ರೋಗ ತಡೆಗೆ, ನಾಯಿ ಸಾಕುವವರ ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗಿದೆ. ಸಾರ್ವಜನಿಕರು ತಾಮ್ಮ ಸಾಕು ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಹಾಕಿಸಿಕೊಂಡು ರೋಗ ನಿಯಂತ್ರಣಕ್ಕೆ ಸಹಕರಿಸಬೆಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net