ನೀರಲಕೇರಿಯಲ್ಲಿ ಹಸು ಕರು ಕೊಂದ ಚಿರತೆ

Cheetah-3
Cheetah
Published on

ಲಿಂಗಸುಗೂರು: ತಾಲೂಕಿನ ನೀರಲಕೇರಿ ಗ್ರಾಮದ ಹೊರವಲಯದಲ್ಲಿ ಚಿರತೆ ಮಂಗಳವಾರ ರಾತ್ರಿ ಹಸು ಕರುವನ್ನು ಕೊಂದಿದೆ. ಗ್ರಾಮದ ಗುಂಡಣ್ಣ ಅವರ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ ಜಾನುವಾರುಗಳ ಮೇಲೆ ದಾಳಿ ಮಾಡಿದೆ. ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳಿಗೆ ಗಾಯಗೊಳಿಸಿದ್ದು, ಕರುವನ್ನು ಎಳೆದೊಯ್ದು ತಿಂದಿದೆ. ವಲಯ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಲಯ ಅರಣ್ಯಾಧಿಕಾರಿ ವಿದ್ಯಾಶ್ರೀ ಮಾತನಾಡಿ, ನೀರಲಕೇರಿ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಕರು ಕೊಂದ ಸ್ಥಳದಲ್ಲಿ ಸಿಸಿ ಕ್ಯಾಮರಾ ಮತ್ತು ಬೋನು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net