ಬೆಳೆ ನಷ್ಟ ಸಮೀಕ್ಷೆ ಮಾಡಿ ಪರಿಹಾರ ನೀಡಿ

lingasugur formaars appeal
ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಹಸಿರು ಸೇನೆ ಜಿಲ್ಲಾ ಘಟಕದ ಮುಖಂಡರು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಕಾರ್ಯಾಧ್ಯಕ್ಷ ಆನಂದ ಕುಮಾರ, ತಾಲೂಕಾಧ್ಯಕ್ಷ ದುರ್ಗಾಪ್ರಸಾದ, ಉಪಾಧ್ಯಕ್ಷ ಹನಮನಗೌಡ, ಕಾರ್ಯಾದರ್ಶಿ ಬಸವರಾಜ ಅಂಗಡಿ, ಪ್ರಮುಖರಾದ ಹನಮಂತ ಜೂಲಗುಡ್ಡ, ಮಹ್ಮದ್ ಖಾಜಾಸಾಬ್ ಇತರರಿದ್ದರು.
Published on

ಲಿಂಗಸುಗೂರು: ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ರಾಂಪುರ ಏತ ನೀರಾವರಿ ಕಾಲುವೆಗಳ ವ್ಯಾಪ್ತಿಯ ಬೆಳೆಗಳು ಒಣಗಿ ನಿಂತಿದ್ದು, ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ ನೇತೃತ್ವದಲ್ಲಿ ರೈತರು ಮಂಗಳವಾರ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.

ಕೆಬಿಜೆಎನ್‌ಎಲ್ ವ್ಯಾಪ್ತಿಯ ಕಾಲುವೆ ಗಳಿಗೆ ಏ.20ರತನಕ ನೀರು ಹರಿಸಲು ಒತ್ತಾಯಿಸಿ ರೈತ ಸಂಘ ಹಾಗೂ ರೈತರು ಹೋರಾಟ ನಡೆಸಿ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ, ಕಾಲುವೆಗಳ ಅಚ್ಚುಕಟ್ಟು ಪ್ರದೇಶಕ್ಕೆ ಏ.7ರವರೆಗೆ ಮಾತ್ರ ನೀರುಹರಿಸುವುದಾಗಿ ಸರ್ಕಾರ ಒಪ್ಪಿಕೊಂಡಿದೆ. ಇದರಿಂದ ಸಂಪೂರ್ಣ ಬೆಳೆ ಕೈ ಸೇರಲ್ಲ. ಈಗಾಗಲೇ ರೈತರು ಹಾಕಿದ ಬೆಳೆ ನೀರಿಲ್ಲದೆ ಒಣಗಿ ಹೋಗಿ ರೈತರು ನಷ್ಟ ಅನುಭವಿಸುತ್ತಾರೆ. ಆದ್ದರಿಂದ ಕೃಷಿ ಮತ್ತು ಕಂದಾಯ ಇಲಾಖೆಗಳು ಜಿಲ್ಲೆಯಲ್ಲಿ ರೈತರ ಬೆಳೆಗಳ ಜಂಟಿ ಸಮೀಕ್ಷೆ ಮಾಡಿ ಒಣಗಿರುವ ಬೆಳೆಗಳ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಬೆಳೆ ನಷ್ಟ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾರ್ಯಾಧ್ಯಕ್ಷ ಆನಂದ ಕುಮಾರ, ತಾಲೂಕಾಧ್ಯಕ್ಷ ದುರ್ಗಾಪ್ರಸಾದ, ಉಪಾಧ್ಯಕ್ಷ ಹನಮನಗೌಡ, ಕಾರ್ಯಾದರ್ಶಿ ಬಸವರಾಜ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net