

ಲಿಂಗಸುಗೂರು: ಸ್ಥಳೀಯ ಪುರಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ದೊಡ್ಡನಗೌಡ ಹೊಸಮನಿ ಅವಿರೋಧವಾಗಿ ಬುಧವಾರ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ದೊಡ್ಡನಗೌಡ ಹೊಸಮನಿ ಅವರಿಂದ ಮಾತ್ರ ನಾಮಪತ್ರ ಸಲ್ಲಿಕೆಯಾಗಿತ್ತು. ನಾಮಪತ್ರಕ್ಕೆ ಪುರಸಭೆ ಸದಸ್ಯರಾದ ಶಿವರಾಯ ದೇಗುಲಮನಿ ಸೂಚಕರಾಗಿ ಮತ್ತು ಎಂ.ಡಿ.ರಫೀ ಅನುಮೋದಕರಾಗಿದ್ದರು. ನಾಮಪತ್ರ ಪರಿಶೀಲನೆ ನಡೆಸಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪುರಸಭೆ ಮುಖ್ಯಾಧಿಕಾರಿ ರವಿ ಸಿರಗುಪ್ಪಿ ಘೋಷಿಸಿದರು.
ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು, ಸದಸ್ಯರಾದ ರಾಜಪ್ಪ ಮುನ್ನೂರು, ಮುತ್ತು ಮೇಟಿ, ಬಸವರಾಜ ಯತಗಲ್, ಶಿವಪ್ಪ ನಾಯಕ, ಸಿಬ್ಬಂದಿ ಶಹನವಾಜ ಇದ್ದರು.