ಮಾರುಕಟ್ಟೆಯಲ್ಲಿ ರಾಖಿಗಳ ರಂಗು

Untitled design(3)
ಲಿಂಗಸುಗೂರಿನ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ಬಣ್ಣ ಬಣ್ಣದ ರಾಖಿಗಳು.
Published on

ಲಿಂಗಸುಗೂರು: ಪಟ್ಟಣದ ಮಾರುಕಟ್ಟೆಯಲ್ಲಿ ರಾಖಿಗಳ ಮಾರಾಟ ಜೋರಾಗಿದೆ. ರಾಕಿ ಹಬ್ಬ ಒಡಹುಟ್ಟಿದವರ ನಡುವೆ ಮಾಡುವ ಬಾಂಧವ್ಯದ ಅನುಬಂಧ. ಶನಿವಾರ ನೂಲು ಹುಣ್ಣಿಮೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಸಹೋದರ ಸಹೋದರಿಯರು ಸಜ್ಜಾಗಿದ್ದಾರೆ.

ಚಿತ್ತಾರದಲ್ಲಿ ಮೂಡುವ ಸಂಭ್ರಮ, ಮಣಿಗಳಲ್ಲಿ, ಹೂ ಆಕಾರದಲ್ಲಿ ದಾರವು ಬಾಂಧವ್ಯವನ್ನು ಬಿಗಿಯಾಗಿಸುತ್ತದೆ. ನಾನಾ ಚಿತ್ತಾರಗಳ ರಾಖಿಗಳು ಅಂಗಡಿಗಳಲ್ಲಿ ಗಮನ ಸೆಳೆಯುತ್ತಿವೆ. ಈ ವರ್ಷ ಗಮನ ಸೆಳೆಯಲಿರುವ ರಾಖಿಗಳೆಂದರೆ ಮಣಿ, ಆಭರಣ ಪ್ರೇರಿತ ರಾಖಿಗಳು.

ಅಲಂಕಾರಿಕ ವಸ್ತುಗಳಿಂದ ತಯಾರಿಸಿರುವ ರಾಖಿಗಳು ವಿಶಿಷ್ಟವಾದ ನೋಟವನ್ನು ನೀಡುತ್ತವೆ. 1 ರೂ.ಯಿಂದ 500 ರೂ. ವರೆಗಿನ ರಾಖಿಗಳು ಬೇಡಿಕೆ ಉಳಿಸಿಕೊಂಡಿವೆ.

ರಕ್ಷಾ ಬಂಧನ, ರಾಖಿ ಹಬ್ಬದ ನೆಪದಲ್ಲಿ ರಾಖಿ ಕಟ್ಟುವುದು ಸಂಪ್ರದಾಯ. ಸಮೀಪದ ಊರುಗಳಿದ್ದರೆ ಸಹೋದರ, ಸಹೋದರಿಯರು ಇದ್ದ ಊರಿಗೆ ತೆರಳಿ ಪರಸ್ಪರ ರಾಖಿ ಕಟ್ಟಿ ಬಾಂಧವ್ಯ ಗಟ್ಟಿಗೊಳಿಸುತ್ತಾರೆ.

ದೂರದ ಊರುಗಳಿದ್ದರೆ ಕೋರಿಯರ್ ಮೂಲಕ ಕಳಿಸಿಕೊಟ್ಟು ಸಂತಸ ಪಡುತ್ತಾರೆ. ಸಂದೇಶಗಳನ್ನು ಬರೆಯಬಲ್ಲ ವಿಶಿಷ್ಟ ರಾಖಿಗಳು ಸಹೋದರ, ಸಹೋದರಿಯರು ಕೊಟ್ಟು ಶುಭ ಕೋರುತ್ತಾರೆ.

ರಕ್ಷಾ ಬಂಧನಕ್ಕೆ ಇನ್ನು ಒಂದೇ ದಿನ ಬಾಕಿ ಇದೆ. ರಾಖಿಗಳು ಖರೀದಿಸಲು ವಿವಿಧ ಅಂಗಡಿಗಳಿಗೆ ಬಂದು ಖರೀದಿಸುತ್ತಿದ್ದಾರೆ. ಹತ್ತಿಯಿಂದ ಸಿದ್ಧಪಡಿಸಿದ ದಾರ, ರೇಷ್ಮೆ ದಾರಗಳೂ ಗಮನ ಸೇಳೆಯುತ್ತಿವೆ. ಮಕ್ಕಳೂ ಸಹ ರಾಖಿಗಳನ್ನು ಖರೀದಿ ಮಾಡುತ್ತಿರುವುದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net