ಸಂತೆ ಮಾರುಕಟ್ಟೆ ಹರಾಜು ಮಾಡದಿರಿ

Untitled design(35)
ಲಿಂಗಸುಗೂರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ದುರ್ಗಾ ಪ್ರಸಾದ, ಉಪಾಧ್ಯಕ್ಷ ಹನಮಗೌಡ, ಬಸವರಾಜ ಗೌಡೂರು, ಪ್ರಮುಖರಾದ ಮಹ್ಮದ ಖಾಜಾ, ಆನಂದ ಕುಂಬಾರ ಇದ್ದರು.
Published on

ಲಿಂಗಸುಗೂರು: ಪಟ್ಟಣದ ತರಕಾರಿ ಸಂತೆ ಮಾರುಕಟ್ಟೆ ಹರಾಜು ಪ್ರಕ್ರಿಯೆ ತಡೆಯಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.

ಆ.19 ರಂದು ಸಂತೆ ಮಾರುಕಟ್ಟೆ ಹರಾಜು ಮಾಡಲು ಟೆಂಡರ್ ಕರೆಯಲಾಗಿದೆ. ಸುಮಾರು 60-70 ವರ್ಷಗಳಿಂದ ಸಂತೆ ಬಜಾರ್ ತೆರಿಗೆ ಹಣ ಸಂಗ್ರಹಿಸಿ ಸಂತೆ ಬಜಾರ ಅಭಿವೃದ್ಧಿ ಪಡಿಸಿಲ್ಲ. ಮಳೆಬಂದರೆ ಮಾರುಕಟ್ಟೆ ಪ್ರಾಂಗಣ ಕೆಸರುಗದ್ದೆಯಾಗುತ್ತದೆ. ತರಕಾರಿ ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಸುಸಜ್ಜಿತ ಸ್ಥಳ ಅಭಿವೃದ್ಧಿ ಪಡಿಸಿಲ್ಲ. ಕರವಸೂಲಿಯ ಹಣ ದುರ್ಬಳಕೆ ಮಾಡಲಾಗಿದೆ. ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವವರೆಗೆ ಸಂತೆ ಹರಾಜು ನಡೆಸಬಾರದು. ಒಂದು ವೇಳೆ ಹರಾಜು ನಡೆಸಿದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net