ಒಳಮೀಸಲಾತಿಯಲ್ಲಿ ಅನ್ಯಾಯ ಸರಿಪಡಿಸಿ

lng-1
ಲಿಂಗಸುಗೂರಿನ ಎಸಿ ಕಚೇರಿ ಅಧಿಕಾರಿಗೆ ಒಳಮೀಸಲಾತಿ ಸಂರಕ್ಷಣಾ ಒಕ್ಕೂಟ ಮನವಿ ಸಲ್ಲಿಸಿತು. ಒಕ್ಕೂಟದ ಅಧ್ಯಕ್ಷ ನಾಗರೆಡ್ಡಿ ರಾಠೋಡ್, ಪ್ರಮುಖರಾದ ಭೀಮಣ್ಣ ಹಿರೇಮನಿ, ಜೀವಲಪ್ಪ ನಾಯಕ, ಲಾಲಪ್ಪ ರಾಠೋಡ ಇತರರಿದ್ದರು.
Published on

ಲಿಂಗಸುಗೂರು: ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಹಾಗೂ ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಒಳ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ನಗರದ ಎಸಿ ಕಚೇರಿ ಅಧಿಕಾರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಆಯೋಗ ಸಲ್ಲಿಸಿದ ವರದಿ ಪ್ರಕಾರ ಭೋವಿ, ಕೊರಚ, ಕೊರಮ, ಲಂಬಾಣಿ ಹಾಗೂ ಅಲೆಮಾರಿ ಸಮುದಾಯಗಳಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸಿಲ್ಲ.

ಎಸ್ಸಿಯ 101 ಜಾತಿಗಳ ಸರ್ವೇ ವೇಳೆ ನ್ಯಾ. ನಾಗಮೋಹನ್ ದಾಸ್ ಆಯೋಗವು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ಇತರ ವಿಷಯಗಳಲ್ಲಿ ನಿಖರ ದತ್ತಾಂಶ ಪಡೆಯದೆ ಸಮಾನತೆ, ನ್ಯಾಯ ಸಮ್ಮತಿ ಒದಗಿಸಿರುವುದಿಲ್ಲ.

ಜಾತಿಗಣತಿ ಸರ್ವೇ ಮಾಡಿದಾಗ ಅನೇಕ ಲೋಪಗಳು ಕಂಡುಬಂದಿವೆ. ಕೆಲ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸರ್ಕಾರಕ್ಕೆ ಐದು ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ನೀಡಲಾಗಿದೆ.

ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಗಳು ಸ್ಪಶ್ಯ ಸಮುದಾಯಗಳೆಂದು ಅಸಂವಿಧಾನಿಕ ಪದಬಳಕೆ ಮಾಡಿ ಸಂವಿಧಾನದ ವಿರುದ್ಧ ನಡೆದುಕೊಂಡಿದ್ದಾರೆಂದು ದೂರಿದರು.

ಒಕ್ಕೂಟದ ಅಧ್ಯಕ್ಷ ನಾಗರೆಡ್ಡಿ ರಾಠೋಡ, ಪ್ರಮುಖರಾದ ಭೀಮಣ್ಣ ಹಿರೇಮನಿ, ಜೀವಲಪ್ಪ ನಾಯಕ, ಲಾಲಪ್ಪ ರಾಠೋಡ, ನಾರಾಯಣಪ್ಪ ರಾಠೋಡ, ಸತ್ಯಪ್ಪ ಮುದಗಲ್ಲ, ಸತ್ಯಪ್ಪ ಲಿಂಗಸುಗೂರು, ರಾಜಶೇಖರ ಹಿರೇಮನಿ, ಶಂಕರ್, ಮೌನೇಶ, ಬಸವರಾಜ, ಉಮಾಪತಿ ನಾಯಕ, ರಾಜು ಚವ್ಹಾಣ್, ರಾಜೇಶ ಮಾಣಿಕ್, ಮುಕೇಶ ಚವ್ಹಾಣ್, ಸೀನು, ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net