

ಲಿಂಗಸುಗೂರು : ಪಟ್ಟಣದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಹೆಚ್ಚುವರಿಯಾಗಿ ನೇಮಕ ಮಾಡಿರುವ 11 ಜನ ಹಮಾಲರನ್ನು ರದ್ದುಪಡಿಸಬೇಕೆಂದು ಜಿಲ್ಲಾ ಕೆಪಿಸಿಎಸ್‌ಸಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಲೇಬರ್ಸ್ ಯೂನಿಯನ್‌ನಿಂದ ಬುಧವಾರ ಸಹಾಯಕ ಆಯುಕ್ತ ಬಸವಣಪ್ಪ ಕಲಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಲಿಂಗಸುಗೂರು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ 19 ಜನ ಹಮಾಲರು (ಲೇಬರ್ಸ್) ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ ಯಾವುದೇ ತಾಲೂಕಿನಲ್ಲಿ ಹೆಚ್ಚುವರಿ ಹಮಾಲರನ್ನು ನೇಮಕ ಮಾಡಿಲ್ಲ.
ಇದನ್ನೂ ಓದಿ : ಹಮಾಲಿ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಿ
ಆದರೆ ಲಿಂಗಸುಗೂರಲ್ಲಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸಕ್ಕಾಗಿ ಹೆಚ್ಚುವರಿಯಾಗಿ 11 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಇದರಿಂದಾಗಿ ಮೊದಲಿನಿಂದಲೂ ದುಡಿಯುತ್ತಾ ಬಂದಿರುವವರಿಗೆ ಕಡಿಮೆ ಕೂಲಿ ಹಣ ದೊರೆಯುತ್ತದೆ. ಕೆಲವೊಮ್ಮೆ ಕೆಲಸವಿಲ್ಲದೆ ಖಾಲಿ ಕೂಡುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಹೆಚ್ಚುವರಿಯಾಗಿ ನೇಮಕಗೊಂಡಿರುವ 11 ಜನ ಹಮಾಲರ ನೇಮಕ ರದ್ದುಪಡಿಸಬೇಕು ಎಂದು ಮನವಿ ಪತ್ರ ಸಲ್ಲಿಸಲಾಯಿತು.
ಲ್ಲಾ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಶಿವಪುತ್ರಗೌಡ ಪಾಟೀಲ, ಲೇಬರ್ (ಹಮಾಲರು)ಗಳಾದ ನಿಂಗಪ್ಪ, ಹನಮಂತ, ಕುಪ್ಪಣ್ಣ, ಶಿವಪ್ಪ, ದುರುಗಪ್ಪ, ಶರಣಪ್ಪ ಇದ್ದರು.