ಅಪಾಯಕ್ಕೂ ಮುನ್ನ ವಿದ್ಯುತ್ ತಂತಿ ಬದಲಿಸಿ

Lingasugur power cable problems
ಲಿಂಗಸುಗೂರಿನಲ್ಲಿ ಜೆಸ್ಕಾಂ ಇಇ ಶ್ರೀನಿವಾಸಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ, ಕಾರ್ಯದರ್ಶಿ ಕುರುಮೇಶ ನಾಯಕ, ಉಪಾಧ್ಯಕ್ಷ ಭೀಮೇಶ ನಾಯಕ, ಸಲೀಂ ಖಾನ್, ಸಿದ್ದು ಚಲುವಾದಿ ಇತರರಿದ್ದರು.
Published on

ಲಿಂಗಸುಗೂರು: ಪಟ್ಟಣದಿಂದ ನಾರಾಯಣಪುರ ರಸ್ತೆಯ ಕಾಳಾಪುರ ಕ್ರಾಸ್ ಬಳಿ 110 ಕೆವಿ ವಿದ್ಯುತ್ ತಂತಿಗಳು ನೇತಾಡುತ್ತಿದ್ದು, ಬದಲಾವಣೆ ಮಾಡುವಂತೆ ಒತ್ತಾಯಿಸಿ ಕರವೇ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಜೆಸ್ಕಾಂ ಇಇ ಶ್ರೀನಿವಾಸಗೆ ಮನವಿ ಸಲ್ಲಿಸಿದರು.

ವಿದ್ಯುತ್ ತಂತಿಗಳು ನೇತಾಡುತ್ತಿದ್ದು, ಈ ಮಾರ್ಗವಾಗಿ ಸಾರಿಗೆ ಬಸ್, ಲಾರಿಗಳು ಸೇರಿ ವಿವಿಧ ವಾಹನಗಳು ಸಂಚರಿಸುತ್ತವೆ. ವಿದ್ಯುತ್ ಪ್ರವಹಿಸುವ ತಂತಿಗಳು ವಾಹನಗಳ ಮೇಲೆ ಕುಳಿತ ಅಥವಾ ಎತ್ತರದ ವಾಹನಗಳು ಸಂಚರಿಸಿದಾಗ ತಗಲುವ ಅಪಾಯವಿದೆ. ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ. ಅಪಾಯ ಸಂಭವಿಸುವ ಮುನ್ನ ತಂತಿಗಳನ್ನು ಸರಿಪಡಿಸಿ ಮೇಲ್ಭಾಗದಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಕರವೇ ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ, ಕಾರ್ಯದರ್ಶಿ ಕುರುಮೇಶ ನಾಯಕ, ಉಪಾಧ್ಯಕ್ಷ ಭೀಮೇಶ ನಾಯಕ, ಪ್ರಮುಖರಾದ ಸಲೀಂ ಖಾನ್, ಸಿದ್ದು ಚಲುವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net