

ಲಿಂಗಸುಗೂರು: ತುಮಕೂರು ಸಿದ್ಧಗಂಗಾ ಮಠದ ಶತಾಯುಷಿ ಶಿವಕುಮಾರ ಸ್ವಾಮೀಜಿಗಳ ಜನ್ಮದಿನದ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಅರವಟಿಗೆ ಮಂಗಳವಾರ ಸ್ಥಾಪಿಸಿದರು.
ಸಮ್ ಕಾಲೇಜು ಆಡಳಿತಾಧಿಕಾರಿ ವಿನಯಕುಮಾರ ಗಣಾಚಾರಿ ನೀರಿನ ಅರವಟಿಗೆ ಚಾಲನೆ ನೀಡಿ ಮಾತನಾಡಿ, ಪಟ್ಟಣಕ್ಕೆ ಶಾಲಾ ಕಾಲೇಜು, ಆಸ್ಪತ್ರೆ, ವ್ಯಾಪಾರ ವಹಿವಾಟಿಗಾಗಿ ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೇಸಿಗೆ ವೇಳೆ ಬಿಸಿಲಿನ ತಾಪಮಾನ ಹೆಚ್ಚಳದಿಂದ ಕುಡಿಯುವ ನೀರಿನ ದಾಹ ತಣಿಸಲು ಪದ್ಮವಿಭೂಷಣ, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಜನ್ಮದಿನದಂದು ಕುಡಿಯುವ ನೀರಿನ ಅರವಟಿಗೆ ಅಳವಡಿಸಿರುವುದು ಪರೋಪಕಾರದ ಕಾರ್ಯವಾಗಿದೆ ಎಂದು ಹೇಳಿದರು.
ರಾಜೇಶ ಮಾಣಿಕ್, ಆಂಜನೇಯ ನಾಯಕ, ಈಶ್ವರ ಕಾಚಾಪುರ, ಬಸವರಾಜ ಗೊಲಪಲ್ಲಿ, ಹನುಮೇಶ ಹೂಗಾರ, ಅಮರೇಶ, ದುರುಗಪ್ಪ, ಪವನ್ ಇತರರಿದ್ದರು.