ವಾರಬಂದಿ ಪ್ರಕಾರ ಏ.20ರ ತನಕ ನೀರು ಬಿಡಿ

Lingasugur formars tractors protest
ಲಿಂಗಸುಗೂರಿನಲ್ಲಿ ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ)ದಿಂದ ಟ್ರಾೃಕ್ಟರ್ ರ‌್ಯಾಲಿ ನಡೆಯಿತು. ಜಿಲ್ಲಾಧ್ಯಕ್ಷ ಶಿವಪುತ್ರ ಗೌಡ,ತಾಲೂಕು ಅಧ್ಯಕ್ಷ ವೈ.ದುರ್ಗಾಪ್ರಸಾದ, ಬಸವರಾಜ ಗೋಡಿಹಾಳ, ಕುಪ್ಪಣ್ಣ ಮಾಣಿಕ್ ವಕೀಲ, ಆನಂದ, ರಾಮಣ್ಣ ಎ., ರಾಮಣ್ಣ ಅಡಿಕೇರ, ಹನುಮನಗೌಡ ದೇವರಭೂಪುರ, ಬಸಣ್ಣ ಕೋಠಾ ಇತರರಿದ್ದರು.
Published on

ಲಿಂಗಸುಗೂರು: ಬಸವಸಾಗರ ಜಲಾಶಯದ ಬಲದಂಡೆ ಮತ್ತು ರಾಂಪುರ ಏತನೀರಾವರಿ ನಾಲೆಗಳಿಗೆ ಏ.20 ರವರೆಗೆ ವಾರಬಂದಿ ಮೂಲಕ ನೀರು ಹರಿಸುವಂತೆ ಆಗ್ರಹಿಸಿ ಸೋಮವಾರ ಗುರುಗುಂಟಾದಿಂದ ಪಟ್ಟಣದ ಎಸಿ ಕಚೇರಿವರೆಗೆ ರೈತರು ಪ್ರತಿಭಟನಾ ರ‌್ಯಾಲಿ ನಡೆಸಿದರು.

ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ)ದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಹಾಗೂ ತಾಲೂಕು ಅಧ್ಯಕ್ಷ ವೈ.ದುರ್ಗಾಪ್ರಸಾದ ನೇತೃತ್ವದಲ್ಲಿ ನೂರಾರು ರೈತರು ತಾಲೂಕಿನ ಗುರುಗುಂಟಾ ಗ್ರಾಮದಿಂದ ಐವತ್ತಕ್ಕೂ ಅಧಿಕ ಟ್ರಾೃಕ್ಟರ್‌ಗಳ ಮೂಲಕ ಪಟ್ಟಣದ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಬಲದಂಡೆ ಮತ್ತು ರಾಂಪುರ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಏ.1 ರಿಂದ 10 ಮತ್ತು 15 ರಿಂದ 20 ರವರೆಗೆ ವಾರಬಂದಿ ಮೂಲಕ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾ.7 ವರೆಗೆ ಗಡುವು ನೀಡಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಮಾ.8 ರಂದು ಗುರುಗುಂಟಾದಲ್ಲಿ ಅಹೋರಾತ್ರಿ ಧರಣಿ, 9 ರಂದು ಮೇಣದ ಬತ್ತಿಯೊಂದಿಗೆ ಮೆರವಣಿಗೆ ನಡೆಸಲಾಗಿದೆ ಎಂದರು.

ಮನವಿ ಸ್ವೀಕರಿಸಿದ ಎಸಿ ಬಸವಣೆಪ್ಪ ಕಲಶೆಟ್ಟಿ ಮಾತನಾಡಿ, ಭೀಮರಾಯನ ಗುಡಿಯಲ್ಲಿ ಮಂಗಳವಾರ (ಮಾ.11) ನೀರಾವರಿ ಅಧಿಕಾರಿಗಳ ಐಸಿಸಿ ಸಭೆ ನಡೆಯಲಿದ್ದು, ಅಧಿಕಾರಿಗಳ ಗಮನಕ್ಕೆ ತರಲಾಗುವುದು. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದು ನಿಮಗೆ ತಿಳಿಸಲಾಗುವುದು ಎಂದರು.

ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಗೋಡಿಹಾಳ, ಕುಪ್ಪಣ್ಣ ಮಾಣಿಕ್ ವಕೀಲ, ಆನಂದ, ರಾಮಣ್ಣ ಅಡಿಕೇರ, ಹನುಮನಗೌಡ ದೇವರಭೂಪುರ, ಬಸಣ್ಣ ಕೋಠಾ, ಬಸವರಾಜ ಅಂಗಡಿ, ಹನುಮಂತ ಅಂಗಡಿ, ಲಕ್ಷ್ಮಣ, ಲಾಲಸಾಬ, ಆದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net