22ರಂದು ಬಸವಪ್ರಿಯ ಅಪ್ಪಣ್ಣನವರ ಪುಣ್ಯಸ್ಮರಣೆ

lng-1
ಬಸವಪ್ರಿಯ ಅಪ್ಪಣ್ಣ ಶರಣರ 17 ನೇ ಪುಣ್ಯಸ್ಮರಣೆ ನಿಮಿತ್ತ ಲಿಂಗಸುಗೂರಿನ ಹಡಪದ ಅಪ್ಪಣ್ಣನವರ ಸಾಂಸ್ಕೃತಿಕ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಹಡಪದ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಜಗನ್ನಾಥ ಚಿತ್ತಾಪುರ, ಜಿಲ್ಲಾಧ್ಯಕ್ಷ ಗದ್ದೆಪ್ಪ ಜಕ್ಕೇರಮಡು, ತಾಲೂಕು ಉಪಾಧ್ಯಕ್ಷ ಮುತ್ತಣ್ಣ ಗುಡಿಹಾಳ, ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ ಇತರರಿದ್ದರು.
Published on

ಲಿಂಗಸುಗೂರು: ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿ ಬಸವಪ್ರಿಯ ಅಪ್ಪಣ್ಣ ಶರಣರ 17ನೇ ಪುಣ್ಯಸ್ಮರಣೆ ಕಾರ್ಯಕ್ರಮ ತಂಗಡಗಿಯಲ್ಲಿ ಜೂ.22 ರಂದು ಹಮ್ಮಿಕೊಳ್ಳಲಾಗಿದೆ ಎಂದು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಜಗನ್ನಾಥ ಚಿತ್ತಾಪುರ ತಿಳಿಸಿದರು.

ಪಟ್ಟಣದ ಹಡಪದ ಅಪ್ಪಣ್ಣನವರ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸೇರಿದಂತೆ ಆಂಧ್ರ, ಮಹಾರಾಷ್ಟ್ರ ಭಾಗದ ಉದ್ದಗಲಕ್ಕೂ ಜ್ಯೋತಿ ರಥಯಾತ್ರೆ ಮೂಲಕ ಸಮಾಜ ಸಂಘಟನೆಯಲ್ಲಿ ಬಸವಪ್ರಿಯ ಶರಣರ ಕೊಡುಗೆ ಅಪಾರವಾಗಿದೆ.

ಹೀಗಾಗಿ ಪ್ರತಿವರ್ಷದಂತೆ ಈ ವರ್ಷ ಜೂ.22 ರಂದು ನಡೆಯಲಿರುವ ಪುಣ್ಯಸ್ಮರಣೆ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ತನು, ಮನ, ಧನದಿಂದ ಕೈ ಜೋಡಿಸಬೇಕೆಂದು ಕೋರಿದರು.

ಸಂಘದ ಜಿಲ್ಲಾಧ್ಯಕ್ಷ ಗದ್ದೆಪ್ಪ ಜಕ್ಕೇರಮಡು, ತಾಲೂಕು ಉಪಾಧ್ಯಕ್ಷ ಮುತ್ತಣ್ಣ ಗುಡಿಹಾಳ, ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಪ್ರಮುಖರಾದ ಅಮರೇಶ ಮಟ್ಟೂರು, ಗುಂಡಪ್ಪ ಮುದಗಲ್, ಮಲ್ಲಿಕಾರ್ಜುನ, ಶಿವಣ್ಣ, ಚನ್ನಪ್ಪ, ಅಮರೇಶ, ತಿಪ್ಪಣ್ಣ, ಪತ್ರೆಪ್ಪ, ಬಸವರಾಜ, ಆದೇಶ, ಆನಂದ, ಅಮರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net