ಹದಿನೈದು ದಿನದೊಳಗೆ ಅಕ್ಕ ಕೆಫೆ ಉದ್ಘಾಟಿಸಿ

Lingasugur akka cafe ceo visit
ಲಿಂಗಸುಗೂರಿನ ಅಕ್ಕ ಕೆಫೆಗೆ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಾಪಂ ಇಒ ಉಮೇಶ, ಸಹಾಯಕ ನಿರ್ದೇಶಕ ಪಂಪನಗೌಡ ಪಾಟೀಲ್, ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪರಮೇಶ್ವರ ಟೆಂಗಳೀಕರ್ ಇತರರಿದ್ದರು.
Published on

ಲಿಂಗಸುಗೂರು : ಪಟ್ಟಣದ ತಾಪಂ ಆವರಣದಲ್ಲಿ ನಿರ್ಮಿಸಿರುವ ‘ಅಕ್ಕ ಕೆಫೆ’ ಕ್ಯಾಂಟೀನ್‌ಗೆ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಶನಿವಾರ ಸಂಜೆ ಭೇಟಿ ನೀಡಿ, ಪರಿಶೀಲಿಸಿದರು.

ಅಕ್ಕ ಕೆಫೆ ಕಾಮಗಾರಿ ಮುಗಿದು ತಿಂಗಳಾದರೂ ಉದ್ಘಾಟನೆ ಆಗದಿರುವ ಕುರಿತು ಜು.18ರಂದು ವಿಜಯವಾಣಿ ‘ ಉದ್ಘಾಟನೆ ಕಾಣದ ಅಕ್ಕ ಕೆಫೆ ಕಟ್ಟಡ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಮರು ದಿನವೇ ಜಿಪಂ ಸಿಇಒ ಭೇಟಿ ನೀಡಿ, ಕೊಠಡಿಗಳ ಪರಿಶೀಲಿಸಿ ಮಾತನಾಡಿದ ಅವರು, ಇನ್ನೂ ಹದಿನೈದು ದಿನದೊಳಗೆ ಕೆಫೆ ಉದ್ಘಾಟಿಸಬೇಕೆಂದು

ತಾಪಂ ಇಒಗೆ ಸೂಚಿಸಿದರು. ಅಲ್ಲದೆ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರೇ ಅಕ್ಕ ಕೆಫೆ ನಿರ್ವಹಣೆ ಮಾಡಬೇಕು. ತಾಪಂ ಇಒ ಅವರೊಂದಿಗೆ ಎನ್‌ಆರ್‌ಎಲ್‌ಎಂ ಸಿಬ್ಬಂದಿ ಸಭೆ ಮಾಡಿ ಮೆನು, ಊಟ ಮತ್ತು ಉಪಾಹಾರದ ದರಪಟ್ಟಿ ನಿಗದಿಪಡಿಸಬೇಕು. ಕೆಫೆಯಲ್ಲಿ ಧೂಮಪಾನ, ಮದ್ಯಪಾನ ಮಾಡದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಸಿಸಿ ಕ್ಯಾಮರಾ, ಬೆಂಕಿ ನಿಯಂತ್ರಣ ಯಂತ್ರ ಅಳವಡಿಸಬೇಕು. ಅಕ್ಕ ಕೆಫೆ ನಿರ್ವಹಣೆ ಮಾಡಲು ನೀಡಿರುವ ಕಟ್ಟಡಕ್ಕೆ ಬಾಡಿಗೆ ನಿಗದಿಪಡಿಸುವಂತೆ

ತಿಳಿಸಿದರು.

ಕೆಫೆ ಮುಖ್ಯದ್ವಾರದ ಮುಂದೆ ಛಾವಣಿಯ ನೀರು ಬೀಳುವುದನ್ನು ತಪ್ಪಿಸಿ ಹಿಂಭಾಗದಲ್ಲಿ ಪೈಪ್ ಸಂಪರ್ಕ ನೀಡಬೇಕು. ಅಕ್ಕ ಕೆಫೆಯ ಉದ್ಘಾಟನೆಗೂ ಮುನ್ನ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ತರಬೇತಿ ನೀಡಬೇಕು. ಇನ್ನು ಹದಿನೈದು ದಿನದೊಳಗೆ ಕೆಫೆ ಉದ್ಘಾಟನೆ ಮಾಡಬೇಕು. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರತ್ಯೇಕ ಸಮವಸ್ತ್ರ ನೀಡಬೇಕು. ಈ ಕೆಫೆ ನಿರ್ವಹಣೆಯನ್ನು ಸ್ವ ಸಹಾಯ ಗುಂಪು ಹಾಗೂ ತಾಲೂಕು ಪಂಚಾಯಿತಿ ಮಾಡಬೇಕು ಎಂದು ಸಿಇಒ ಸೂಚಿಸಿದರು. ತಾಪಂ ಇಒ ಉಮೇಶ, ಸಹಾಯಕ ನಿರ್ದೇಶಕ ಪಂಪನಗೌಡ ಪಾಟೀಲ್, ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪರಮೇಶ್ವರ ಟೆಂಗಳೀಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net