ಸ್ಕೌಟ್ಸ್, ಗೈಡ್ಸ್ ಯುವಕರಿಗೆ ಶೀಘ್ರ ಎಲ್‌ಎಲ್‌ಆರ್; ಸಿಪಿಐ ಮಹಾಂತೇಶ ಸಜ್ಜನ್ ಭರವಸೆ

07122020 Lingasugur Scouts and Guides
Published on

ವಾರಿಯರ್ಸ್‌ಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ

ಲಿಂಗಸುಗೂರು: ಸ್ಕೌಟ್ಸ್ ಮತ್ತು ಗೈಡ್ಸ್ ಯುವಕರಿಗೆ ಶೀಘ್ರ ಎಲ್‌ಎಲ್‌ಆರ್ ಲೈಸೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ಸಿಪಿಐ ಮಹಾಂತೇಶ ಸಜ್ಜನ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಸೋಮವಾರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕೋವಿಡ್-19 ವಾರಿಯರ್ಸ್‌ಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ರಕ್ಷಣಾ ಇಲಾಖೆಯಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್ನೆಸ್ಸೆಸ್ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ. ಕರೊನಾ ಸಂದರ್ಭ ಪೊಲೀಸ್, ಆರೋಗ್ಯ, ಸಿಡಿಪಿಒ, ಆಶಾ, ಕಂದಾಯ ಸೇರಿದಂತೆ ಇತರೆ ಇಲಾಖೆ ಅಧಿಕಾರಿ, ಸಿಬ್ಬಂದಿಯೊಂದಿಗೆ ಜೀವದ ಹಂಗು ತೊರೆದು ಸ್ಕೌಟ್ಸ್ ಮತ್ತು ಗೈಡ್ಸ್ ಯುವಕರು ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಪೊಲೀಸರ ಜತೆ ಸಾರ್ವಜನಿಕ ಹಿತಾಸಕ್ತಿ ಕಾಪಾಡುವಲ್ಲಿ ಸಂಸ್ಥೆಯ ಯುವಕರು ನೀಡಿದ ಸಹಕಾರ ಶ್ಲಾಘನೀಯ ಎಂದರು.

ಬಿಇಒ ಹುಂಬಣ್ಣ ರಾಠೋಡ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತೆ ಅಜೀಜಾ ಸುಲ್ತಾನ್, ಮುಖ್ಯಶಿಕ್ಷಕ ಸಾಬಣ್ಣ ವಗ್ಗರ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸಿದ್ದಪ್ಪ ಮುಕ್ಕಣ್ಣನವರ್, ಶಿವಾನಂದ ನರಹಟ್ಟಿ, ದೈಹಿಕ ಶಿಕ್ಷಕರಾದ ಗುರುಸಂಗಯ್ಯ ಗಣಾಚಾರಿ, ಶಿವಪುತ್ರ ಬೀದರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಕರಡಿ, ಚನ್ನಪ್ಪ ರಾಠೋಡ್ ಸೇರಿದಂತೆ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net