ಕೃಷ್ಣಾ ನದಿಗೆ ನೀರು; ಗಿದ ಶೀಲಹಳ್ಳಿ ಸೇತುವೆ

07082020 Lingasuguru Shilahalli Bridge
Published on

ಲಿಂಗಸುಗೂರು: ನಾರಾಯಣಪುರ ಜಲಾಶಯದ 17 ಕ್ರಸ್ಟ್ ಗೇಟ್‌ಗಳನ್ನು 2 ಮೀಟರ್ ಎತ್ತರಿಸಿ ಕೃಷ್ಣಾ ನದಿಗೆ 1.84 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ಪ್ರವಾಹ ಹೆಚ್ಚಾಗಿದ್ದು, ಶೀಲಹಳ್ಳಿ ಸೇತುವೆ ಮೇಲೆ ನೀರು ಬಂದಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದೆ. ಕೊಯ್ನ ಜಲಾಶಯ ಭರ್ತಿಯಾಗಿದ್ದರಿಂದ ಆಲಮಟ್ಟಿ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ನಾರಾಯಣಪುರ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದ್ದರಿಂದ ಹೊರ ಬಿಡುತ್ತಿರುವ ಕಾರಣ, ಶೀಲಹಳ್ಳಿ ಸೇತುವೆ ಮುಳುಗಿದ್ದು, ಇದರ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಸೇತುವೆಯ ಎರಡೂ ಬದಿ ಬ್ಯಾರಿಕೇಡ್ ಅಳವಡಿಸಿ, ಪೊಲೀಸರನ್ನು ನಿಯೋಜಿಸಲಾಗಿದೆ. ನದಿ ತೀರದ ಶೀಲಹಳ್ಳಿ, ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಸ್ಥರು ಜಲದುರ್ಗ ಮಾರ್ಗವಾಗಿ 45 ಕಿ.ಮೀ. ಸುತ್ತು ಹಾಕಿ, ತಾಲೂಕು ಕೇಂದ್ರಕ್ಕೆ ಬರುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net