

ಲಿಂಗಸುಗೂರು: ಬಿಜೆಪಿ ಸಿದ್ಧಾಂತ, ಉತ್ತಮ ವಿಚಾರಧಾರೆಗಳ ಸಮಗ್ರ ಅರಿವು ಹೊಂದಿ ಕಾರ್ಯಕರ್ತರು ಮುನ್ನಡೆದರೆ ಪಕ್ಷ ಸಂಘಟನೆ ಸಾಧ್ಯವಾಗಲಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾನದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲದಿಂದ ಬುಧವಾರ ಆಯೋಜಿಸಿದ್ದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರಾಭಿಮಾನ, ಪಕ್ಷದ ತತ್ವಸಿದ್ಧಾಂತ, ಉತ್ತಮ ನಾಯಕತ್ವ, ಪಕ್ಷನಿಷ್ಠೆ ಕಾರ್ಯಕರ್ತರಿಂದ ಬಿಜೆಪಿ ಬಲಾಡ್ಯ ಪಕ್ಷವಾಗಿ ಹೊರಹೊಮ್ಮಿದೆ. ಅನ್ಯರ ಓಲೈಕೆಗೆ ಮಾತ್ರ ಹೆಚ್ಚು ಒತ್ತು ನೀಡುವ ಪಕ್ಷಗಳನ್ನು ಕಾಣಬಹುದು. ಆದರೆ, ದೇಶ ಮೊದಲು, ಪಕ್ಷ ನಂತರ ಎಂಬ ತತ್ವ ಸಿದ್ಧಾಂತ ಬಿಜೆಪಿ ಪಕ್ಷದಲ್ಲಿ ಮಾತ್ರ ಕಾಣಬಹುದಾಗಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ತಾಲೂಕು ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ನಾಗಪ್ಪ ವಜ್ಜಲ್, ಗಿರಿಮಲ್ಲನಗೌಡ ಪಾಟೀಲ್, ಶಿವಬಸಪ್ಪ ಮಾಲಿಪಾಟೀಲ್, ಜಗನ್ನಾಥ ಕುಲಕರ್ಣಿ, ಗೋವಿಂದ ನಾಯಕ, ಅನಂತದಾಸ್ ಸೇರಿ ಇದ್ದರು.