ಲಿಂಗಸುಗೂರಲ್ಲಿ ಅನವಶ್ಯಕ ರೋಡಿಗಿಳಿದ 90 ಬೈಕ್‌ಗಳು ಪೊಲೀಸರ ವಶಕ್ಕೆ

12042020 Lingasaguru Bike seized
Published on

ಲಿಂಗಸುಗೂರು : ಅನಗತ್ಯ ಸಂಚರಿಸುವವರ ಸುಮಾರು 90ಕ್ಕೂ ಹೆಚ್ಚು ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರೊನಾ ವೈರಸ್ ಸೋಂಕು ಸಮುದಾಯದವರೆಗೆ ತಲುಪದಂತೆ ಮುನ್ನೆಚ್ಚರಿಕೆ ಕ್ರಮವಹಿಸಲು ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಪಟ್ಟಣದ ನಾಗರಿಕರಿಗೆ ಕಿರಾಣಿ, ತರಕಾರಿ, ಹಾಲು ಸೇರಿ ದಿನಸಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನದ ನಂತರ ಸಾರ್ವಜನಿಕರ ಓಡಾಟ ಮತ್ತು ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆದರೆ, ನಿಯಮ ಪಾಲಿಸದೆ ಅನಗತ್ಯ ಸಂಚರಿಸುವವರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net